ಟಾಸ್ಕ್ ವಿಚಾರವಾಗಿ ಲಾಯರ್ ಜಗದೀಶ್ ಹಾಗೂ ಧನರಾಜ್ ಆಚಾರ್ ನಡುವೆ ಜಗಳ ನಡೆದಿದ್ದು, ಜಗಳದ ಬಳಿಕ ಧನರಾಜ್ ಕಣ್ಣೀರು ಹಾಕಿರುವ ಘಟನೆ ಬಿಗ್ ಬಾಸ್ ನಲ್ಲಿ ನಡೆಯಿತು.
ತನ್ನ ಕಾಮಿಡಿ ವಿಡಿಯೋ ಮೂಲಕ ಎಲ್ಲರನ್ನು ನಗಿಸುತ್ತಿದ್ದ ಧನರಾಜ್ ಅವರು ಇದೀಗ ದೊಡ್ಮನೆಯಲ್ಲಿ ಆಗುತ್ತಿರುವ ಜಗಳದಿಂದ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಬಳಿ ಮಾತನಾಡುವಾಗ ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಗಲಾಟೆಯಿಂದ ಮಂಕಾಗಿದ್ದೇನೆ. ಹೇಗೆ ಇರಬೇಕೆಂದು ಗೊತ್ತಾಗ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಧನರಾಜ್ ಕಣ್ಣೀರು ಹಾಕುತ್ತಿರುವುದನ್ನು ನೋಡಿದವರು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಮೊದಲನೇ ವಾರನೇ ಹೀಗೆ ಅಳ್ಕೊಂಡು ಕೂತ್ಕೊಂಡ್ರೆ ಹೇಗೆ, ವೀಕ್ ಮೈಂಡ್ ಇರುವವವರು ಬಿಗ್ ಬಾಸ್ ಗೆ ಹೋಗಬಾರದು ಎಂದು ಹಲವರು ಹೇಳಿದ್ದಾರೆ.
ಕಾಮಿಡಿ ವಿಡಿಯೋ ಮಾಡಿದಷ್ಟು ಬಿಗ್ ಬಾಸ್ ಆಟ ಸುಲಭವಲ್ಲ, ಮುಂದೆ ಹೋಗ್ತಾ ಹೋಗ್ತಾ ನಿಮಗೆ ಗೊತ್ತಾಗುತ್ತೆ ಬಿಡಿ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


