ಆಂಧ್ರಪ್ರದೇಶ: ತಿರುಪತಿ ದೇವಸ್ಥಾನದ ನೈವೇದ್ಯ ಪ್ರಸಾದದಲ್ಲಿ ಕೀಟಗಳು ಕಂಡು ಬಂದಿವೆ ಎನ್ನುವ ಭಕ್ತರ ಆರೋಪಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಳ್ಳಿಹಾಕಿದೆ.
ಬುಧವಾರ ಮಧ್ಯಾಹ್ನ 1.30ಕ್ಕೆ ದೇವಸ್ಥಾನದಲ್ಲಿ ಊಟ ಬಡಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ತನ್ನ ಮೊಸರು ಅನ್ನದಲ್ಲಿ ಮಿಲಿಪೈಡ್ ಕಂಡುಬಂದಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ನಿರ್ಲಕ್ಷ್ಯ ಸರಿಯಲ್ಲ, ಮಕ್ಕಳು ಅಥವಾ ಇತರರು ಕಲುಷಿತ ಆಹಾರವನ್ನು ಸೇವಿಸಿದರೆ, ಫುಡ್ ಪಾಯ್ಸನ್ ಗೆ ಯಾರು ಹೊಣೆಗಾರರಾಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಟಿಟಿಡಿ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಅವುಗಳನ್ನು ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿದೆ.
ಶ್ರೀವಾರಿ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಬಿಸಿಯೂಟ ಅನ್ನ ಪ್ರಸಾದವನ್ನು ಟಿಟಿಡಿ ಸಿದ್ಧಪಡಿಸುತ್ತಿದ್ದು, ಆಹಾರದಲ್ಲಿ ಮಿಲಿಪೆಡ್ ಬಿದ್ದಿದೆ ಎಂಬುದು ಸುಳ್ಳು ಹೇಳಿಕೆಯಾಗಿದೆ. ಇದು ವೆಂಕಟೇಶ್ವರನ ಮೇಲಿನ ಭಕ್ತರ ನಂಬಿಕೆಯನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಮತ್ತು ಸಂಸ್ಥೆಯನ್ನು ದೂಷಿಸುವ ಸಾಧನವಾಗಿದೆ ಎಂದು ಟಿಟಿಡಿ ಹೇಳಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q