ತುಮಕೂರು: ಸುಗ್ಗಿ ಹಬ್ಬ ಸಂಕ್ರಾಂತಿ ಎಂದರೆ, ಎಲ್ಲಡೆ ಸಡಗರ ಸಂಭ್ರಮ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬ ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಈ ಹಬ್ಬದ ದಿನ ವಿವಿಧ ಭಕ್ಷ್ಯಗಳಾದ ವಿಶೇಷ ಕಡಲೆ, ಅವರೆ, ಕಬ್ಬು, ಗೆಣಸು, ಉಗ್ಗಿ, ಪೊಂಗಲ್ ಬಳಸಲಾಗುವುದು. ಅದರಲ್ಲಿ ಗೆಡ್ಡೆ ಗೆಣಸು, ಮರ ಗೆಣಸು ವಿಶೇಷವಾಗಿದೆ.
ಅದೇ ರೀತಿ ಬಳ್ಳಿ ಗೆಣಸು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ತಿಟ್ಟೆ ಗೆಣಸು ಎಂದು ಇದನ್ನು ಕರೆಯುತ್ತಾರೆ. ಈ ಗೆಣಸು ಸಂಕ್ರಾಂತಿ ವಿಶೇಷ ಸರಿ… ಅಲ್ಲದೇ ಈಗ ಕೋವಿಡ್ ನಂತಹ ಸಮಯದಲ್ಲಿ ಈ ಗೆಣಸು ಆರೋಗ್ಯಕ್ಕೆ ಲಾಭದಾಯಕವಾಗಿದೆ. ನಗರದ ಹನುಮಂತಪುರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಾರುಕಟ್ಟೆಯಲ್ಲಿ ಇದು ಲಭ್ಯವಿದೆ.
ಸ್ಥಳೀಯ ರೈತರು ವಿಶೇಷವಾಗಿ ಈ ಬಳ್ಳಿ ಗೆಣಸನ್ನು ಬೆಳೆಯುತ್ತಿದ್ದು, ಇದನ್ನು ಸುಗ್ಗಿ ಕಾಲಕ್ಕೆ ಮಾರಾಟ ಮಾಡುತ್ತಾರೆ. ಈ ಗೆಣಸಿನಿಂದಾಗುವ ಆರೋಗ್ಯದ ಲಾಭಗಳನ್ನು ವಿವರಿಸಿ ಮಾತನಾಡಿದ ರೈತ ಕೃಷ್ಣಪ್ಪ, ನಾವು ನಮ್ಮ ತಾತನ ಕಾಲದಿಂದಲೂ ಬಳ್ಳಿ ಗೆಣಸು ಬೆಳೆದು ಮಾರಾಟ ಮಾಡುತ್ತಿದ್ದೇವೆ. ವರ್ಷಕ್ಕೆ ಒಂದೇ ಬೆಳೆ ಬೆಳೆದು ಕಟಾವು ಮಾಡಲಾಗುವುದು ದೀಪಾವಳಿ ನಂತರ ಸುಗ್ಗಿ ಕಾಲಕ್ಕೆ ಕಟಾವು ಮಾಡಲಾಗುತ್ತದೆ. ನಾವು ಈ ಬಾರಿ ಮೂರು ಟನ್ ಬೆಳೆದಿದ್ದು ಕೆ.ಜಿ.ಗೆ ನೂರು ರೂ.ನಂತೆ ಮಾರಾಟ ಮಾಡುತ್ತಿದ್ದೇವೆ ಎಂದರು.
ಇದರಿಂದ ಆರೋಗ್ಯಕ್ಕೆ ಉತ್ತಮ ಲಾಭಗಳಿದ್ದು, ವಾಯು, ಉಬ್ಬಸ, ಕಿಡ್ನಿಯಲ್ಲಿ ಕಲ್ಲು, ಹೊಟ್ಟೆ ಉಬ್ಬರ ಸೇರಿದಂತೆ ಅನೇಕ ಕಾಯಿಲೆಗಳ ನಿವಾರಣೆಗೆ ಇದು ಸಹಕಾರಿಯಾಗಿದೆ. ಇದನ್ನು ಎಲ್ಲಾ ವರ್ಷದ ವಯೋಮಾನದವರು ತಿನ್ನಬಹುದು. ಕೋವಿಡ್ ನಂತಹ ಸಮಯದಲ್ಲಿ ಲಾಭದಾಯಕವಾಗಿರುವ ಈ ಗೆಣಸು ತಿಂದು ಉತ್ತಮ ಜೀವನಾರೋಗ್ಯ ಕಾಪಾಡಿಕೊಳ್ಳ ಬಹುದು ಎಂದರು.
ವರದಿ: ರವಿಕುಮಾರ್ ಸಿ.ಹೆಚ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy