ಶೋ ರೂಮ್‌ನಿಂದ ಕಾರು ಕದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಗೆಳತಿಯನ್ನು ಹೊಸ ಕಾರಿನಲ್ಲಿ ಡ್ರೈವ್ ಗೆ ಕರೆದೊಯ್ಯಲು ಆರೋಪಿಗಳು ಈ ಕೃತ್ಯ ಎಸಗಿದ್ದಾರಂತೆ!
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ವಿಶ್ವವಿದ್ಯಾನಿಲಯದ ಈ ಮೂವರು ವಿದ್ಯಾರ್ಥಿಗಳು ಬಂಧಿತ ಆರೋಪಿಗಳಾಗಿದ್ದಾರೆ. ಸೆಪ್ಟೆಂಬರ್ 26 ಕಾರು ಕಳವು ನಡೆದಿತ್ತು. ಆರೋಪಿ ಮತ್ತವನ ಸ್ನೇಹಿತರೂ ಸೇರಿದಂತೆ ಮೂವರು ಕಾಲೇಜು ವಿದ್ಯಾರ್ಥಿಗಳು ಗ್ರೇಟರ್ ನೋಯ್ಡಾದ ಕಾರ್ ಬಜಾರ್‌ನಲ್ಲಿ ಹೊಚ್ಚಹೊಸ ಹ್ಯುಂಡೈ ವೆನ್ಯೂ ಕಾರಿನ ಟೆಸ್ಟ್ ಡ್ರೈವ್ ಕೇಳಿದ್ದು, ಕಾರ್ ಡೀಲರ್ ವಾಹನವನ್ನು ಹೊರತೆಗೆದು ಆರೋಪಿ ವಿದ್ಯಾರ್ಥಿ ಮತ್ತವನ ಜೊತೆ ಬಂದಿದ್ದ ಇಬ್ಬರೊಂದಿಗೆ ಕುಳಿತಿದ್ದಾನೆ.
ಪೊಲೀಸರ ಪ್ರಕಾರ, ಸ್ವಲ್ಪ ದೂರ ಹೋದ ನಂತರ ಡೀಲರ್ ನನ್ನು ಕಾರಿನಿಂದ ತಳ್ಳಿ ಮೂವರೂ ಪರಾರಿಯಾಗಿದ್ದಾರೆ. 100ಕ್ಕೂ ಹೆಚ್ಚು ಸಿಸಿಟಿವಿಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗಿದ್ದು, ಕೊನೆಗೂ ಮೂವರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296