ಪುರುಷನನ್ನು ಬೋಳು ಎಂದು ಕರೆಯುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಯುಕೆ ನ್ಯಾಯಾಲಯ ತೀರ್ಪು ನೀಡಿದೆ.
ವೆಸ್ಟ್ ಯಾರ್ಕ್‌ಷೈರ್ ಮೂಲದ ಸಂಸ್ಥೆಯ ಮೇಲೆ ಲೈಂಗಿಕ ಕಿರುಕುಳಕ್ಕಾಗಿ ಮೊಕದ್ದಮೆ ಹೂಡಿದ ಬ್ರಿಟಿಷ್ ಬಂಗ್ ಕಂಪನಿಯ ಮಾಜಿ ಉದ್ಯೋಗಿ ಟೋನಿ ಫಿನ್ ಒಳಗೊಂಡ ಪ್ರಕರಣದಿಂದ ಈ ತೀರ್ಪು ಬಂದಿದೆ.
ಟೋನಿ ಫಿನ್, ಎಲೆಕ್ಟ್ರಿಷಿಯನ್, ಸುಮಾರು 24 ವರ್ಷಗಳ ಕಾಲ ಬ್ರಿಟಿಷ್ ಬಂಗ್ ಕಂಪನಿಯಲ್ಲಿ ಕೆಲಸ ಮಾಡಿದ್ದು, ಮೇ 2021 ರಲ್ಲಿ ಅವರನ್ನು ವಜಾಗೊಳಿಸಲಾಯಿತು. ಅವರ ವಜಾಗೊಳಿಸಿದ ನಂತರ, ಫಿನ್ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡರು.
ನನ್ನನ್ನು ಬೋಳು ತಲೆಯವ ಎಂದು ಅವಹೇಳನ ಮಾಡಲಾಗಿದೆ ಎಂದು ಟೋನಿ ಫಿನ್ ಪ್ರಮುಖವಾಗಿ ಆರೋಪಿಸಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ, ಕಾರ್ಖಾನೆಯ ಮೇಲ್ವಿಚಾರಕರಾದ ಜೇಮೀ ಕಿಂಗ್ ಅವರು ಟೋನಿ ಫಿನ್ ಅವರನ್ನು ಬೋಳ ಎಂದು ಕರೆದಿರುವುದೇ ವಿಚಾರಣೆಯ ಮುಖ್ಯ ಭಾಗವಾಯ್ತು. ಬೋಳ(ಬೊಕ್ಕತಲೆಯವ) ಎಂದು ಕರೆಯುವುದು ಕೇವಲ ಅವಮಾನ ಮಾತ್ರವಲ್ಲ, ಲೈಂಗಿಕ ಕಿರುಕುಳ ಎಂದು ವಾದಿಸಲಾಯಿತು.
ಉದ್ಯೋಗ ಟ್ರಿಬ್ಯೂನಲ್ ಫಿನ್ ಪರವಾಗಿ ತೀರ್ಪು ನೀಡಿತು. ಹೀಗಾಗಿ ಟೋನಿ ಫಿನ್ ಗೆ ಕೊನೆಗೂ ನ್ಯಾಯ ಸಿಕ್ಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


