ಭೋಪಾಲ್: ಡಿಜೆ ಸೌಂಡಿಗೆ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಸಮರ್ ಬಿಲೋರ್ (13) ಮೃತ ಬಾಲಕ. ಸ್ಥಳೀಯ ಉತ್ಸವದ ವೇಳೆ ಈ ಘಟನೆ ನಡೆದಿದೆ. ಗುಂಪಿನ ನಡುವೆ ಡಿಜೆ ಸೌಂಡಿಗೆ ಸಮರ್ ಕುಣಿಯುತ್ತಿದ್ದ. ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದರೂ ಕುಣಿಯುವುದರಲ್ಲಿ ಮಗ್ನರಾಗಿದ್ದ ಇತರರು ಆತನನ್ನು ಗಮನಿಸಲಿಲ್ಲ. ಸ್ವಲ್ಪ ಸಮಯದ ಬಳಿಕ ಸಮರ್ ಬಿದ್ದಿರುವುದನ್ನು ನೋಡಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಆತ ಬದುಕುಳಿಯಲಿಲ್ಲ.
ಇನ್ನು ಸಮರ್ಗೆ ಬಾಲ್ಯದಿಂದಲೂ ಹೃದ್ರೋಗವಿದೆ. ಆದರೂ ಆತನ ಆರೋಗ್ಯ ಚೆನ್ನಾಗಿಯೇ ಇತ್ತು ಎಂದು ಅವರ ತಾಯಿ ಹೇಳಿದ್ದಾರೆ. ಅಧಿಕ ಶಬ್ದವನ್ನು ದೇಹ ತಡೆದುಕೊಳ್ಳಲು ಸಾಧ್ಯವಾಗದೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವೈದ್ಯರು ಹೇಳುತ್ತಾರೆ.
ಈ ಘಟನೆಯ ನಂತರ 40 ರಿಂದ 50 ಡೆಸಿಬಲ್ ಗಿಂತ ಹೆಚ್ಚಿನ ಸ್ಪೀಕರ್ ಗಳನ್ನು ಅಳವಡಿಸದಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q