ಲಕ್ನೋ: ಮಹಿಳಾ ಕಾನ್ ಸ್ಟೇಬಲ್ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಆರೋಪಿಯ ಕೈ ಕಚ್ಚಿ ಮಹಿಳಾ ಕಾನ್ ಸ್ಟೇಬಲ್ ತಮ್ಮನ್ನು ರಕ್ಷಣೆ ಮಾಡಿಕೊಂಡಿದ್ದಾರೆ.
ಅಯೋಧ್ಯೆಯ ಮೀಸಲು ಪೊಲೀಸ್ ಪಡೆಯಲ್ಲಿ ಹಿರಿಯ ಕಾನ್‌ಸ್ಟೆಬಲ್ ಆಗಿರುವ ಸಂತ್ರಸ್ತೆ, ‘ಕರ್ವಾ ಚೌತ್’ ಹಬ್ಬದ ಆಚರಣೆಗೆಂದು ಶನಿವಾರ ರಾತ್ರಿ ಕಾನ್ಪುರದ ಬಳಿ ಇರುವ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು.
ಈ ವೇಳೆ ದಾರಿಯಲ್ಲಿ ಪರಿಚಿತ ವ್ಯಕ್ತಿ ಧರ್ಮೇಂದ್ರ ಪಾಸ್ವಾನ್ ಸಿಕ್ಕಿದ್ದು, ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಬಿಡುವುದಾಗಿ ಹೇಳಿದ್ದಾನೆ. ಆದರೆ ಮನೆಗೆ ಕರೆದುಕೊಂಡು ಹೋಗದೇ ಕೆಟ್ಟ ಉದ್ದೇಶದಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಈ ವೇಳೆ ಸಂತ್ರಸ್ತೆ ಸಹಾಯಕ್ಕಾಗಿ ಕೂಗಾಡಿದ್ದಾರೆ. ಆದರೆ ಯಾರೂ ಸಹಾಯಕ್ಕೆ ಧಾವಿಸಿಲ್ಲ. ಬಳಿಕ ಆತನ ಕೈಬೆರಳನ್ನು ಬಲವಾಗಿ ಕಚ್ಚಿ ಆಕೆ ಪಾರಾಗಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296