ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ಕೊರಟಗೆರೆ : ಬೈರೇನಹಳ್ಳಿಯಿಂದ ಕೊರಟಗೆರೆ ಸಂಪರ್ಕದ 10 ಕಿ.ಮೀ. ಪಿಡ್ಲ್ಯೂಡಿ ಮುಖ್ಯರಸ್ತೆಯಲ್ಲಿ 100ಕ್ಕೂ ಅಧಿಕ ಗುಂಡಿಗಳು ಬಿದ್ದು ಪ್ರತಿನಿತ್ಯವು ಅಪಘಾತ ಆಗ್ತಿದ್ರು ಸಹ, ಪಿಡ್ಲ್ಯೂಡಿ ಇಲಾಖೆ ಮಾತ್ರ ಗ್ರಾಮೀಣ ಪ್ರದೇಶದ ಕಡೆಗಳಿಗೆ ತಿರುಗಿಯು ನೋಡದಿರುವ ಪರಿಣಾಮ ಸ್ಥಳೀಯರೇ ಮುಖ್ಯರಸ್ತೆಗಳಿಗೆ ಕಲ್ಲು–ಮಣ್ಣು ಸುರಿದು ತೇಪೆ ಹಚ್ಚಲು ಕೆಲಸ ಮಾಡಿದ್ದು, ಈ ಘಟನೆ ಪಿಡ್ಲ್ಯೂಡಿ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.
ಕೊರಟಗೆರೆಯಿಂದ ಬೈರೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಪಿಡ್ಲ್ಯೂಡಿ ಮುಖ್ಯರಸ್ತೆಯ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರನ ಜೊತೆ ಅಧಿಕಾರಿವರ್ಗವು ಸಹ ಕಾಣೆಯಾಗಿದ್ದಾರೆ. ಹೀಗಾಗಿ ಗ್ರಾಮೀಣ ರಸ್ತೆಗಳು ಗುಂಡಿಮಯ ಆಗಿವೆ. ಬಿ.ಡಿ.ಪುರದಿಂದ ಹೊಳವನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯೇ ಮಾಯವಾಗಿ ಗುಂಡಿಗಳೇ ಹೆಚ್ಚಾಗಿ ಅಪಘಾತದ ಸಂಖ್ಯೆ ಪ್ರತಿನಿತ್ಯ ಏರಿಕೆ ಆಗುತ್ತಲೇ ಇದೆ.
ಕುರಿ–ಮೇಕೆ ಸಂತೆಗೂ ರಸ್ತೆಯೇ ವಿಘ್ನ:
ಪಿಡ್ಲ್ಯೂಡಿ ಇಲಾಖೆಯ ಮುಖ್ಯರಸ್ತೆಗಳ ದುಸ್ಥಿತಿಯಿಂದ ಕರ್ನಾಟಕದ ಸುಪ್ರಸಿದ್ದ ಅಕ್ಕಿರಾಂಪುರ ಕುರಿ-ಮೇಕೆ ಸಂತೆಗೂ ವಿಘ್ನ ಎದುರಾಗಿದೆ. ರಸ್ತೆಗಳಲ್ಲಿ ಪ್ರತಿನಿತ್ಯವು ಅಪಘಾತ ದೃಶ್ಯಗಳನ್ನು ನೋಡಿ ಬೇರೆ ಕಡೆಗಳಿಂದ ವಾಹನ ಸವಾರರು ಸಂತೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ವ್ಯಾಪಾರಸ್ಥರ ಆಗಮನದ ಸಂಖ್ಯೆ ಕಡಿಮೆಯಾಗಿ ರೈತರು ತರುವ ಕುರಿಮೇಕೆಗಳ ವ್ಯಾಪಾರವು ಕುಂಠಿತವಾಗಿದೆ.
ಮಳೆಯಿಂದ ಪಿಡ್ಲ್ಯೂಡಿ ರಸ್ತೆಗಳೇ ಮಾಯ:
ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ, ಬಿ.ಡಿ.ಪುರ ಗ್ರಾಪಂ ಹಾಗೂ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡ್ಲ್ಯೂಡಿ ಮುಖ್ಯ ರಸ್ತೆಗಳೇ ಈಗ ಗುಂಡಿಮಯ ಆಗಿವೆ. ನಾಗರಕೆರೆ, ಬೈಚಾಪುರ ಕ್ರಾಸ್, ಅಕ್ಕಿರಾಂಪುರ ಸೇತುವೆ, ಬೈಚಾಪುರ ಗ್ರಾಮ, ಕಳ್ಳಿಪಾಳ್ಯ ಕ್ರಾಸ್, ಬಿ.ಡಿ.ಪುರ-ಬೈರೇನಹಳ್ಳಿ ಸಂಪರ್ಕ ರಸ್ತೆಯಲ್ಲಿ 200ಕ್ಕೂ ಅಧಿಕ ಗುಂಡಿಗಳಿದ್ದು ಮಳೆನೀರು ತುಂಬಿರುವ ಪರಿಣಾಮ ರಸ್ತೆಗಳೇ ಕಾಣದಾಗಿದೆ.
ಅಪಘಾತ ನಡೆದ್ರು ಕ್ಯಾರೇ ಅನ್ನೋಲ್ಲ:
ಕೊರಟಗೆರೆಯಿಂದ ಗೌರಿಬಿದನೂರು ಮತ್ತು ಬೈರೇನಹಳ್ಳಿಯಿಂದ ಬಿ.ಡಿ.ಪುರ ಮಾರ್ಗವಾಗಿ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುತ್ತವೆ. ಪ್ರತಿನಿತ್ಯವು ಅಪಘಾತ ನಡೆದ್ರು ಪಿಡ್ಲ್ಯೂಡಿ ಇಲಾಖೆ ಮಾತ್ರ ಕ್ಯಾರೇ ಅನ್ನೋತ್ತಿಲ್ಲ. ಅಪಘಾತಕ್ಕೂ ಪಿಡ್ಲ್ಯೂಡಿ ಇಲಾಖೆಗೂ ಸಂಬಂಧವೇ ಇಲ್ಲವೆಂಬ ಅಧಿಕಾರಿಗಳ ವರ್ತನೆಗೇ ಸ್ಥಳೀಯರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡ್ಲ್ಯೂಡಿ ಇಲಾಖೆಯ ನಿರ್ಲಕ್ಷದಿಂದ ಗುತ್ತಿಗೆದಾರ ಕಾಣೆಯಾಗಿ ರಸ್ತೆಗಳ ನಿರ್ವಹಣೆಯೇ ಇಲ್ಲ. 6ತಿಂಗಳಿಂದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಮುಚ್ಚಲು ಆಗದಿರುವ ಪಿಡ್ಲ್ಯೂಡಿ ಇಲಾಖೆಯ ಕೆಲಸವೇ ಅರ್ಥಆಗ್ತಿಲ್ಲ. ಸ್ಥಳೀಯರೇ ರಸ್ತೆಗಳ ಕಲ್ಲು-ಮಣ್ಣು ಹಾಕಿದ್ರು ರಸ್ತೆ ಸಮಸ್ಯೆಗೆ ಮುಕ್ತಿಯೇ ಇಲ್ಲದಾಗಿದೆ.
— ರಾಜಣ್ಣ. ಸ್ಥಳೀಯವಾಸಿ. ಸೋಂಪುರ.
ಕೊರಟಗೆರೆಯಿಂದ ಬೈರೇನಹಳ್ಳಿ ಸಂಪರ್ಕದ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಸ್ಥಳಕ್ಕೆ ಈಗಾಗಲೇ ನಮ್ಮ ಅಧಿಕಾರಿವರ್ಗ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೇ. ಪಿಡ್ಲ್ಯೂಡಿ ಇಲಾಖೆ ವ್ಯಾಪ್ತಿಯಲ್ಲಿ ನಿರ್ವಹಣೆ ಇಲ್ಲದಿರುವ ರಸ್ತೆಗಳ ಮಾಹಿತಿ ಪಡೆದು ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆ.
— ಹನುಮಂತರಾವ್ .ಇ ಇ. ಪಿಡ್ಲ್ಯೂಡಿ ಇಲಾಖೆ. ಮಧುಗಿರಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q