ಅಫ್ಘಾನಿಸ್ತಾನ: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ, ಸುಮಾರು 26 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಾದ್ಘಿಸ್ನು ಪಶ್ಚಿಮ ಪ್ರಾಂತ್ಯದ ಖಾದಿಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದು, ಇಲ್ಲಿನ ಮನೆಗಳ ಮೇಲ್ಛಾವಣಿ ಕುಸಿದು ಐವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಸೇರಿ ಒಟ್ಟು 26 ಜನರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ವಕ್ತಾರ ಬಾಜ್ ಮೊಹಮ್ಮದ್ ಸರ್ವಾರಿ ತಿಳಿಸಿದ್ದಾರೆ.
ಈಗಾಗಲೇ ಅಪ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿದ್ದು ಜನರು ಸಾಕಷ್ಟು ನರಳುತ್ತಿದ್ದಾರೆ ಇದರ ಮಧ್ಯೆ ಈ ಭೂಕಂಪನವು ಇನ್ನಷ್ಟು ನೋವು ನೀಡಿದೆ.
ಯುಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಆಳವಿಲ್ಲದ ಭೂಕಂಪನವು 5.3 ತೀವ್ರತೆಯನ್ನು ಹೊಂದಿದೆ. ಅಪ್ಘಾನಿಸ್ತಾನವು ಆಗಾಗ್ಗೆ ಭೂಕಂಪನಗಳಿಗೆ ಸಾಕ್ಷಿಯಾಗುತ್ತಿದೆ. ವಿಶೇಷವಾಗಿ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಹೆಚ್ಚಾಗಿ ಭೂಮಿ ಕಂಪಿಸುತ್ತದೆ. ಇದು ಯುರೇಷಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್ಗುಳ ಜಂಕ್ಷನ್ನ್ ಸಮೀಪದಲ್ಲಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy