ತುಮಕೂರು: ಒಳಮೀಸಲಾತಿ ಜಾರಿಗೆ ತರಬೇಕು ಹಾಗೆಯೇ ಒಳಮೀಸಲಾತಿ ಜಾರಿ ಹಾಗುವವರೆಗೂ ಈಗ ಘೋಷಣೆಯಾಗಿರುವ ನೇಮಕಾತಿ ಆದೇಶ ತಡೆಹಿಡಿಯಬೇಕು ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಒತ್ತಾಯಿಸಿದರು.
ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ತಮಟೆ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಹರಿಯಾಣದಲ್ಲಿ ಒಳಮೀಸಲಾತಿ ಜಾರಿಗೆ ತಂದಿದ್ದಾರೆ. ಕೆಲವು ರಾಜ್ಯಗಳಲ್ಲಿ ದತ್ತಾಂಶ ಕೊರತೆ ಇರಬಹುದು. ಆದರೆ ಕರ್ನಾಟಕದಲ್ಲಿ LG ಹಾವನೂರ ವರದಿ, ಸದಾಶಿವವರದಿ, ಕಾಂತರಾಜ್ ವರದಿ, ಮಾಧುಸ್ವಾಮಿ ವರದಿ, ನಗಮೋಹನ್ ದಾಸ್ ವರದಿ ಇವೆಲ್ಲದರ ಜೊತೆಗೆ 2011 ಜಾತಿಜನಗತಿ ಇದ್ದರೂ ಇನ್ನೂ ದತ್ತಾಂಶ ಕೇಳುವುದು ಅಂದರೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎನ್ನುವ ಲೆಕ್ಕಾಚಾರ ನಮಗೆ ಅರ್ಥವಾಗುತ್ತದೆ ಎಂದರು.
ಒಳಮೀಸಲಾತಿ ತೀರ್ಮಾನ ಆಗಿಲ್ಲ ಅಂದರೆ ಈಗ ನಡೆಯುವ ಚುನಾವಣೆಯಲ್ಲಿ ನಮ್ಮ ಸಮಾಜ ಬುದ್ಧಿ ಕಲಿಸುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Y.H.ಹುಚ್ಚಯ್ಯ, ಕೆಂಚಮಾರಯ್ಯ, ವಾಲೆಚಂದ್ರಣ್ಣ ನರಸೀಯಪ್ಪ, ಗುಬ್ಬಿ ಜಗನಾಥ, ಮಧುಗಿರಿ ಗೋಪಾಲಯ್ಯ, B.G.ಸಾಗರ್, ರಾಮಣ್ಣ, ಯೋಗೀಶ್ ನಿಟ್ಟೂರು ರಂಗಶಮಯ್ಯ, ಚಿಕ್ಕನಾಯಕನಹಳ್ಳಿ ಮಂಗಳಮ್ಮ, ತಿಪಟೂರು ಶಾಂತಪ್ಪ, ರಂಗಶಮಯ, ತುರುವೇಕೆರೆ ಚಿದಾನಂದ, ಕುಣಿಗಲ್ ಶಿವಶಂಕರ್, ನರಸಿಂಹಮೂರ್ತಿ, T.N.ಪೇಟೆ ರಮೇಶ್, ದಲಿತ್ ಕುಮಾರ್ ರಾಮಂಜಿ , ನಾಗೇಂದ್ರ, ಬಬ್ಬುರು ಪರಮೇಶ್, ಗುರುಶಾಮಯ್ಯ, ಬೋರಣಕುಂಟೆ ಕರಿಯಣ್ಣ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q