ಮಧುಗಿರಿ: ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು, ಆದರೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕಾಣೆಯಾಗಿರುವುದನ್ನ ಗಮನಿಸಿದ ಕನ್ನಡಪರ ಸಂಘಟನೆಗಳ ಹೋರಾಟಗಾರರು ಸಿಡಿ ಮಿಡಿಗೊಂಡು ಅಬಕಾರಿ ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಗೈರುಹಾಜರಿದ್ದನ್ನು ಡಿವೈಎಸ್ಪಿ ಚಂದ್ರಪ್ಪರನ್ನು ಪ್ರಶ್ನಿಸಿದ್ದಕ್ಕೆ ನಾನು ಮೂರು ದಿನಗಳಿಂದ ಕಛೇರಿಯಲ್ಲಿ ಇರಲಿಲ್ಲ, ಹಾಗಾಗಿ ನಾನು ಬೇರೆ ಇನ್ಸ್ ಪೆಕ್ಟರ್ ಗೆ ಧ್ವಜಾರೋಹಣ ನೇರವೇರಿಸಲು ಸೂಚನೆ ನೀಡಿದ್ದೇನೆ ಎಂದು ಚಂದ್ರಪ್ಪ ಹೇಳಿದ್ದಾರೆ.
ಈ ವೇಳೆ ಇನ್ಸ್‌ಪೆಕ್ಟರ್ ಗೆ ಕರೆ ಮಾಡಿ ವಿಚಾರಿಸಿದಾಗ ನನಗೆ ಕೊರಟಗೆರೆ ಇನ್ ಚಾರ್ಜ್ ನೀಡಿದ್ದು, ನಾನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿದ್ದೇನೆ. ಮಧುಗಿರಿಯಲ್ಲಿ ಡಿವೈಎಸ್ಪಿ ಚಂದ್ರಪ್ಪ ಅವರೇ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡು ಅಧಿಕಾರಿಗಳು ಕನ್ನಡಾಂಬೆಗೆ ಅಗೌರವ ತರುತ್ತಿರುವುದಂತೂ ಸುಳ್ಳಲ್ಲ. ಇತ್ತ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಂತರ ಕನ್ನಡ ಪರ ಸಂಘಟನೆಯವರೆ ಅಬಕಾರಿ ಇಲಾಖೆಯಲ್ಲಿ ದ್ವಜರೋಹಣ ನೇರವೇರಿಸಿರುವುದು ಅಲ್ಲಿನ ಅಬಕಾರಿ ಇಲಾಖೆಯ ಡಿವೈಎಸ್ಪಿ ಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ.
ಈಗಾಗಲೇ ಸಾಕಷ್ಟು ಆರೋಪಗಳು ಇವರ ಮೇಲಿದ್ದರೂ ಸ್ವತಃ ಸಹಕಾರಿ ಸಚಿವರೆ ಇವರ ಸಸ್ಪೆಂಡಿಗೆ ಪತ್ರ ಬರೆದಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಮೇಲಾಧಿಕಾರಿಗಳ ಅಸಮರ್ಥತೆಯನ್ನು ಅವರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಲೋಕಾಯುಕ್ತ ಇಲಾಖೆಯಾದರೂ ಇವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎನ್ನುವ ಕೂಗು ಕನ್ನಡಪರ ಹೋರಾಟಗಾರರಿಂದ ಕೇಳಿ ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q