ಸರಗೂರು: ತಾಲೂಕಿನ ಪಟ್ಟಣದ ನಾಲ್ಕನೇ ವಾರ್ಡಿನ ನಿವಾಸಿಯಾದ ಆಟೋ ಜೋಗಪ್ಪ ಅಪ್ಪಟ ಕನ್ನಡ ಅಭಿಮಾನಿ. ಇವರು 20 ರಿಂದ 25 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ದಿನದಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಆಟೋ ಗೆ ಶೃಂಗಾರ ಮಾಡಿ ನಂತರ ತಾಯಿ ಭುವನೇಶ್ವರಿ ಪೋಟೋಗೆ ಪುಷ್ಪಹಾರ ಹಾಕಿ ಕನ್ನಡ ರಾಜ್ಯೋತ್ಸವ ಆಚರಿಸಿದ ಅವರು ಬಳಿಕ ಮಾತನಾಡಿ, ಈ ದಿನದಂದು ನನ್ನ ಆಟೋದಲ್ಲಿ ಯಾರೇ ಸಂಚಾರ ಮಾಡಿಕೊಂಡು ಬರುವವರಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ. ಇದರಿಂದ ನಾನು ಕನ್ನಡ ನಾಡಿನಲ್ಲಿ ಹುಟ್ಟಿರುವುದಕ್ಕೂ ಸಾರ್ಥಕ ವಾಗಿದೆ ಎಂದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 1 ರಂದು ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಉಚಿತವಾಗಿ ಸಾರ್ವಜನಿಕರಿಗೆ ಪ್ರಯಾಣ ಹಾಗೂ ಅದರ ಜೊತೆಯಲ್ಲಿ ಶಾಲೆಯ ಮಕ್ಕಳಿಗೆ ಪುಸ್ತಕಗಳು ಮತ್ತು ಇನ್ನೂ ವಿವಿಧ ಸೇವೆ 20, ವರ್ಷದಿಂದ ಮಾಡಿಕೊಂಡು ಬರುತ್ತಿರುತ್ತೇನೆ ಎಂದು ಹೇಳಿದರು.
ಈ ದಿನದಂದು ಜನರ ಸೇವೆ ಮಾಡಿದ್ದರಿಂದ ಕನ್ನಡ ನಾಡಿಗೆ ಅಭಿಮಾನಕ್ಕೆ ಕೊಡುವ ಸೇವೆ ಎಂದು ಭಾವಿಸುತ್ತಾನೆ ಎಂದರು.
ನಾನು ಸುಮಾರು ವರ್ಷಗಳಿಂದ ಆಟೋ ಹೋಡಿಸಿಕೊಂಡು ಜೀವನ ಮಾಡಿಕೊಂಡು ಬರುತ್ತಿದ್ದಾನೆ.ನವಂಬರ್ 1 ರಂದು ಶಾಲೆಯ ಮಕ್ಕಳಿಗೆ ನನ್ನ ಕಡೆಯಿಂದ ಸ್ವಂತ ಹಣದಿಂದ ಪುಸ್ತಕ ನೀಡುತ್ತಾ ಬಂದಿದ್ದಾರೆ.
ಎಲ್ಲಾ ಸಾರ್ವಜನಿಕರಿಗೆ ನನ್ನ ಆಟೋರಿಕ್ಷಾದಿಂದ ಬೆಳ್ಳಿಗೆದಿಂದ ಸಂಜೆ ವರೆಗೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾನೆ. ಅದರಿಂದ ನನಗೆ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಈ ವ್ಯಕ್ತಿ ಗೆ ನವೆಂಬರ್ 1 ಸಾಮಾನ್ಯ ದಿನವಲ್ಲ. ಪ್ರತಿ ರಾಜ್ಯೋತ್ಸವ ದಿನದಂದು ಅವರು ತಮ್ಮ ಆಟೋ ಅನ್ನು ತಪ್ಪದೇ ಎಲ್ಲರೂ ನೋಡುವ ರೀತಿಯಲ್ಲಿ ಸಿದ್ಧಪಡಿಸುತ್ತಾರೆ. ಸರ್ಕಾರಿ ಸ್ವಾಮ್ಯದ ನಿಗಮಗಳ ಅನೇಕ ಬಸ್ ಗಳು ತಮ್ಮ ವಾಹನಗಳಿಗೆ ಹಾರ ಮತ್ತು ಧ್ವಜಗಳಿಂದ ಅಲಂಕರಿಸಿದರೆ, ಪಟ್ಟಣದ ಆಟೋ ಚಾಲಕ ಆಟೋ ಜೋಗಪ್ಪ ಅವರು ಮಾತ್ರ ತಮ್ಮ ಆಟೋವನ್ನು ವಿಭಿನ್ನವಾಗಿ ಅಲಂಕರಿಸುತ್ತಾರೆ.
ಶುಕ್ರವಾರದಂದು ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಳಿ ಇರುವ ಆಟೋ ನಿಲ್ದಾಣಕ್ಕೆ ಪ್ರವೇಶಿಸಿದಾಗ ಆಟೋದ ಸುತ್ತ ಜನಸಾಗರವೇ ನೆರೆದಿತ್ತು ಮತ್ತು ಅವರು ಫೋಟೋ, ವಿಡಿಯೋ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇದು 20 ನೇ ಬಾರಿ ನಾವು ಈ ರೀತಿಯ ವಿಶಿಷ್ಟ ಆಚರಣೆಯನ್ನು ಆಚರಿಸುತ್ತಿದ್ದೇವೆ. ಕನ್ನಡಕ್ಕೆ ಇತರ ಭಾಷೆಗಳೊಂದಿಗೆ ಸ್ಪರ್ಧಿಸುವ ಸವಾಲು ಇದೆ, ನಾವು ಕನ್ನಡ ಪುಸ್ತಕಗಳು, ಕರ್ನಾಟಕದ ಪ್ರತಿಯೊಂದು ತಾಲೂಕು ಮತ್ತು ಜಿಲ್ಲೆಯ ವಿವರಗಳನ್ನು ನಮ್ಮ ಆಟೋದಲ್ಲಿ ಇರಿಸಿದ್ದೇವೆ. ಕುಟುಂಬ ಇದನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q