ಇಂಫಾಲ: ಸಬ್ ಇನ್‌ಸ್ಪೆಕ್ಟರ್ ಒಬ್ಬರನ್ನು ಪೊಲೀಸ್ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಣಿಪುರದಲ್ಲಿ ನಡೆದಿದೆ.
ಮಣಿಪುರ ಪೊಲೀಸ್ ಪೇದೆಯೊಬ್ಬರು ಮಾತಿನ ಚಕಮಕಿಯ ನಂತರ ತನ್ನ ಹಿರಿಯ ಸಹೋದ್ಯೋಗಿ, ಸಬ್ ಇನ್‌ಸ್ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿಯ ಮೇಲೆ ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆ.
ಕಾನ್ಸ್ ಟೇಬಲ್ ಬಿಕ್ರಿಮ್‌ಜಿತ್ ಸಿಂಗ್ ಅವರಿಂದ ಕೊಲೆಯಾದ ಎಸ್ ಐ ಅನ್ನು ಪಹಜಹಾನ್ ಎಂದು ಗುರುತಿಸಲಾಗಿದೆ. ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಇಬ್ಬರ ನಡುವೆ ಸಂಭವಿಸಿದ ಜಗಳದ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಕ್ಷಣ ಆರೋಪಿ ಕಾನ್ ಸ್ಟೆಬಲ್‌ನನ್ನು ಇತರ ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296