ವರದಿ : ಮಂಜುಸ್ವಾಮಿ ಎಂ.ಎನ್.
ತುಮಕೂರು : ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಜ್ಜನಹಳ್ಳಿ ಗ್ರಾಮದ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಹಾಗೂ ಶಿಕ್ಷಕರ ನಿರ್ಲಕ್ಷ್ಯದಿಂದ ಅಭಿಷೇಕ್ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲೂಕಿನ ಹೋಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಕುನಿತಿಮ್ಮನಹಳ್ಳಿ ಗ್ರಾಮದ ರಮೇಶ್ ಮತ್ತು ಮಂಜುಳಾ ದಂಪತಿಯ ಪುತ್ರ ಅಭಿಷೇಕ್ (13) ದೀಪಾವಳಿ ಹಬ್ಬಕ್ಕೆಂದು ಮನೆಗೆ ಹೋಗಿದ್ದ ಸೋಮವಾರ ಬೆಳಿಗ್ಗೆ ಪುನಃ ವಸತಿ ಶಾಲೆಗೆ ಮೃತ ವಿದ್ಯಾರ್ಥಿ ಬಂದಿದ್ದಾನೆ. ಮಧ್ಯಾಹ್ನದವರೆಗೂ ತರಗತಿಯಲ್ಲಿ ಕುಳಿತು ಪಾಠ ಕೇಳಿದ್ದಾನೆ. ಮಧ್ಯಾಹ್ನದ ಊಟದ ನಂತರ ಸುಸ್ತು ಆಗುತ್ತಿದೆ ಎಂದು ಹೇಳಿ ವಸತಿ ಶಾಲೆಯ ಕೊಠಡಿಗೆ ತೆರಳಿ ಮಲಗಿದ್ದಾನೆ. ಸಹಪಾಠಿಗಳು ವಿಚಾರಿಸಿದಾಗ ಅಭಿಷೇಕ್ ನನಗೆ ತುಂಬಾ ಸುಸ್ತು ಮತ್ತು ಆಯಾಸವಾಗುತ್ತಿದೆ ನಾನು ಮಲಗುತ್ತೇನೆ ಎಂದು ಹೇಳಿದ್ದಾನೆ.
ವಸತಿ ಶಾಲೆಯ ಶಿಕ್ಷಕರ ಮತ್ತು ಪ್ರಿನ್ಸಿಪಾಲ್ ವಾರ್ಡನ್ ರವರ ದಿವ್ಯ ನಿರ್ಲಕ್ಷತೆಯಿಂದ ವಿದ್ಯಾರ್ಥಿ ಅಭಿಷೇಕ್ ಮೃತನಾಗಿದ್ದಾನೆ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಸತಿ ಶಾಲೆಗೆ ಭೇಟಿ:
ಬಜ್ಜನಹಳ್ಳಿಯ ಏಕಲವ್ಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿಗಳ ಅಂಗಳಕ್ಕೆ ತಲುಪಿದ ಕೂಡಲೇ ಜಿಲ್ಲಾಧಿಕಾರಿ ಶುಭಕಲ್ಯಾಣ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ವಿದ್ಯಾರ್ಥಿ ಅಭಿಷೇಕ್ ಸಾವಿನ ಸಮಗ್ರ ತನಿಖೆಗೆ ಮಾಡಬೇಕೆಂದು ಆದೇಶ ನೀಡಿದರು.ನಾಲ್ಕು ದಿನಗಳಿಂದ ವಸತಿ ಶಾಲೆಯಲ್ಲಿ ಇಲ್ಲದೆ ರಜೆ ಹಾಕಿದ್ದ ಪ್ರಿನ್ಸಿಪಾಲ್ ಮತ್ತು ವಾರ್ಡನ್ ರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಸೂಚನೆ ನೀಡಿದರು.
ವಸತಿ ಶಾಲೆಯ 29 ಶಿಕ್ಷಕರಿಗೂ ಕನ್ನಡ ಭಾಷೆ ಬರಲ್ಲ:
ಹೊರ ರಾಜ್ಯದ ಶಿಕ್ಷಕರಿಗೆ ಕನ್ನಡ ಭಾಷೆ ಬಾರದ ಕಾರಣ ಸ್ಥಳೀಯ ಬಡ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಪಾಠ ಮಾಡಲು ಕನ್ನಡ ಬಾರದವರನ್ನು ಇಲಾಖೆ ನಿಯೋಜನೆ ಮಾಡಿದ್ದು, ಮಕ್ಕಳ ಕಷ್ಟ ಸುಖಗಳನ್ನು ಆಲಿಸದೆ ಗಂಟೆ ಹೊಡೆದು ಸಂಬಳ ತೆಗೆದುಕೊಳ್ಳುವ ಈ ಶಿಕ್ಷಕರು ಇದ್ದಾರೆಷ್ಟು ಬಿಟ್ಟರೆಷ್ಟು ಎಂದು ಸ್ಥಳೀಯ ಸಾರ್ವಜನಿಕರು ಹರಿಹಾಯ್ದ ಘಟನೆ ನಡೆದಿದೆ.
ವಸತಿ ಶಾಲೆಯಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಎಲ್ಲರೂ ಕೂಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು, ವಿದ್ಯಾರ್ಥಿಗಳಿಗೆ ಹಿಂದಿ ಭಾಷೆ ಬಾರದ ಕಾರಣ ಶಿಕ್ಷಕರೊಂದಿಗೆ ಸಂವಾದ ಮಾಡುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ಸರ್ಕಾರ ತಕ್ಷಣ ಎಚ್ಚೆತ್ತು ಸ್ಥಳೀಯ ಶಿಕ್ಷಕರನ್ನು ನಿಯೋಜನೆ ಮಾಡಬೇಕೆಂದು ಪೋಷಕರು ಮತ್ತು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ..
ಪ್ರಿನ್ಸಿಪಾಲ್ ಮತ್ತು ವಾರ್ಡನ್ ಅಮಾನತ್ತಿಗೆ ಡಿಸಿ ಶುಭ ಕಲ್ಯಾಣ್ ಆದೇಶ:
ಬಜ್ಜನಹಳ್ಳಿ ಏಕಲವ್ಯ ವಸತಿ ಶಾಲೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆದಿದೆ. ನಾಲ್ಕು ದಿನಗಳಿಂದ ರಜೆಯಲ್ಲಿದ್ದ ವಾರ್ಡನ್ ಮಂಜುನಾಥ್ ಮತ್ತು ಪ್ರಿನ್ಸಿಪಾಲ್ ವಿನೋದ್ ಯಾದವ್ ಅವರನ್ನು ಅಮಾನತ್ತು ಮಾಡುವಂತೆ ಸೂಚನೆ ನೀಡಿರುವ ಘಟನೆಯು ನಡೆದಿದೆ.
ಮೃತ ವಿದ್ಯಾರ್ಥಿ ಅಭಿಷೇಕ್ ಮೂಗು ಮತ್ತು ಬಾಯಲ್ಲಿ ರಕ್ತ:
ಸುಸ್ತು ಆಗುತ್ತಿದೆ ಎಂದು ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮೃತ ವಿದ್ಯಾರ್ಥಿ ಅಭಿಷೇಕ್ ಯನ್ನು ನೋಡಲು ಹೋದ ವಿದ್ಯಾರ್ಥಿಗಳು ಶಾಕ್ ಆದ ಘಟನೆ ನಡೆದಿದೆ ಏಕೆಂದರೆ ಮೃತ ವಿದ್ಯಾರ್ಥಿ ಅಭಿಷೇಕ್ ಮೂಗು ಮತ್ತು ಬಾಯಲ್ಲಿ ರಕ್ತ ಮತ್ತು ಜೊಲ್ಲು ಬರುತ್ತಿದ್ದನು ಅಭಿಷೇಕ್ ಸಹಪಾಠಿ ವಿದ್ಯಾರ್ಥಿಗಳು ನೋಡಿ ಶಾಕ್ ಆಗಿರುವ ಘಟನೆಯೂ ಸಹ ನಡೆದಿದೆ. ನಂತರ ವಸತಿ ಶಾಲೆಯಲ್ಲಿ ಇದ್ದ ನರ್ಸ್ ಗಮನಕ್ಕೆ ತಂದ ವಿದ್ಯಾರ್ಥಿಗಳು ವಿಚಾರವನ್ನು ತಂದಿದ್ದಾರೆ. ನಂತರ ನರ್ಸ್ ಅಭಿಷೇಕ್ ನನ್ನು ನೋಡಿದಾಗ ಅಭಿಷೇಕ್ ಮೃತಪಟ್ಟಿರುವುದು ದೃಢವಾಗಿದೆ ನಂತರ ಸ್ಥಳೀಯ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಅಭಿಷೇಕ್ ನನ್ನು ತಪಾಸಣೆ ಮಾಡಿದಾಗ ಅಭಿಷೇಕ್ ಮೃತಪಟ್ಟಿರುವುದು ತಿಳಿದು ಬಂದಿರುತ್ತದೆ.
ಮೃತ ವಿದ್ಯಾರ್ಥಿ ಅಭಿಷೇಕ್ ಸಾವಿಗೆ ಕಾರಣರಾದ ಪ್ರಿನ್ಸಿಪಾಲ್ ಮತ್ತು ಅಮಾನತ್ತು ಮಾಡಬೇಕೆಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜುಗೆ ಈಗಾಗಲೇ ನಾನು ಸೂಚನೆ ನೀಡಿದ್ದೇನೆ. ಮರಣೋತ್ತರ ಪರೀಕ್ಷೆಯ ಬಳಿಕ ವಿದ್ಯಾರ್ಥಿಯ ಸಾವಿಗೆ ಕಾರಣ ಏನೆಂಬುದು ಸಮಗ್ರ ತನಿಖೆಗೆ ನಾನು ಈಗಾಗಲೇ ಆದೇಶಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q