ಕೊರಟಗೆರೆ: ಕಿಟಕಿ ಬಾಗಿಲು ಇಲ್ಲದ ಕೊಠಡಿಯೊಳಗೆ 250ಜನ ವಿದ್ಯಾರ್ಥಿಗಳ ವಾಸ, ಚಳಿಮಳೆ ಗಾಳಿಯ ಭದ್ರತೆಗೆ ವಿದ್ಯಾರ್ಥಿಗಳು ಮಲಗುವ ಚಾಪೆಯೇ ಆಸರೆ, ಸ್ನಾನ ಮಾಡಲು ನೀರು ಬರೋದಿಲ್ಲ ಇನ್ನೂ ಶೌಚಗಳಿಗೆ ದೇವರೇ ಗತಿ, ಇದು ಕೊರಟಗೆರೆ ತಾಲೂಕು ಹಂಚಿಹಳ್ಳಿ ಗ್ರಾಪಂ ಬಜ್ಜನಹಳ್ಳಿ ಏಕಲವ್ಯ ವಸತಿಶಾಲೆಯ ದುಸ್ಥಿತಿ.
ಸ್ವೀಚ್ ಬೋರ್ಡು ಪೀಸ್ ಪೀಸ್ ಆಗಿ ಕೊಠಡಿಗಳಿಗೆ ವಿದ್ಯುತ್ ಸಂಪರ್ಕವೇ ಕಡಿತವಾಗಿದೆ. ಸಿಸಿಟಿವಿ ಇಲ್ಲದ ಏಕಲವ್ಯ ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಭದ್ರತೆಯೇ ಮರೀಚಿಕೆಯಾಗಿದೆ.
ಅಧಿಕಾರಿಗಳ ನಿರ್ಲಕ್ಷದಿಂದ ಕೊಠಡಿಯಲ್ಲಿ ಮೃತಪಟ್ಟಿದ್ದ ಏಕಲವ್ಯ ವಸತಿಶಾಲೆಯ ದುಸ್ಥಿತಿ ಇದಾಗಿದೆ. ಏಕಲವ್ಯ ವಸತಿಶಾಲೆಗೆ ಕಾಂಪೌಂಡ್ ಇಲ್ಲದೇ ಒಳಗಡೆ ಯಾರು ಬೇಕಾದ್ರು ಬರಬಹುದು. ವಿದ್ಯಾರ್ಥಿಗಳು ಯಾವಾಗ ಬೇಕಾದ್ರು ಹೊರಗಡೆ ಹೋಗುವ ಅವಕಾಶವಿದೆ.
ತುಮಕೂರು ಜಿಲ್ಲಾಧಿಕಾರಿ ಭೇಟಿ ನೀಡಿದ ವೇಳೆ ನಿಲಯದ ಪ್ರಾಂಶುಪಾಲ ಮತ್ತು ವಾರ್ಡನ್ ಅವರನ್ನು ತರಾಟೆಗೆತ್ತಿಕೊಂಡರು. 15ದಿನಗಳ ಒಳಗೆ ಮೂಲಭೂತ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದರು. ಪ್ರಾಂಶುಪಾಲ ಮತ್ತು ವಾರ್ಡನ್ ಅಮಾನತಿಗೆ ತುಮಕೂರು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296