ಸರಗೂರು: ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಶುಕ್ರವಾರದಂದು ಮೈಸೂರು ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪರವರನ್ನು ಮನೆಯಲ್ಲಿ ಭೇಟಿ ಮಾಡಿತು.
ಇದೇ ವೇಳೆ ಸಮುದಾಯದ ಭವನಕ್ಕೆ ಅನುದಾನವನ್ನು ನೀಡಿ ಎಂದು ಪದಾಧಿಕಾರಿಗಳು ಮನವಿ ಮಾಡಿದರು.
ನಂತರ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ ಅವರು, ತಾಲೂಕಿನ ನಮ್ಮ ಸಮಾಜದ ವತಿಯಿಂದ ಎಲ್ಲಾ ಗ್ರಾಮಗಳಲ್ಲಿ ಚಂದ ವಸೂಲಾತಿ ಮಾಡಿಕೊಂಡು ಪಟ್ಟಣದಲ್ಲಿ ಒಂದು ಜಾಗವನ್ನು ತೆಗೆದುಕೊಂಡು ಅದರಲ್ಲಿ ಬಸವ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಅದರಿಂದ ಭವನಕ್ಕೆ ಅಂದಾಜು ವೆಚ್ಚ 8 ರಿಂದ 10 ಕೋಟಿ ಅನುದಾನ ಬೇಕಾಗಿದೆ. ಆದರಿಂದ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಮಾಡಿ ನಮ್ಮ ಸಮಾಜಕ್ಕೆ ಶಾಸಕ ಅನಿಲ್ ಚಿಕ್ಕಮಾದುರವರನ್ನು ಒಳಗೊಂಡು ಬಸವ ಭವನಕ್ಕೆ ಅನುದಾನವನ್ನು ಬಿಡುಗಡೆ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದರು.
ನಂತರ ಮಾತನಾಡಿ ಮೈಸೂರು ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅಖಿಲ ಭಾರತ ವೀರಶೈವ ಲಿಂಗಾಯತ ಸಮುದಾಯ ಸಮಾಜದ ಅಭಿವೃದ್ಧಿಗೆ ಸರ್ಕಾರ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಿಳಿಸಿ ಚರ್ಚೆ ಮಾಡಿ ನಂತರ ಎಷ್ಟು ಅನುದಾನವಾಗುತ್ತದೆ. ಅಷ್ಟು ಅನುದಾನವನ್ನು ಬಿಡುಗಡೆ ಮಾಡಲು ಪ್ರಯತ್ನ ಮಾಡುತ್ತೇನೆ. ನಾವೇ ಬಂದು ಬಸವ ಭವನಕ್ಕೆ ಗುದ್ದಲಿ ಪೂಜೆ ಮಾಡುತ್ತವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ , ಪ್ರಧಾನ ಕಾರ್ಯದರ್ಶಿ ಮುನುಗನಹಳ್ಳಿ ಗುರುಸ್ವಾಮಿ, ಕಾರ್ಯಾಧ್ಯಕ್ಷ ಗಿರೀಶ್, ಬಸವ ಬಳಗ ಅಧ್ಯಕ್ಷ ಗಣಪತಿ, ಅಣ್ಣಯ್ಯಸ್ವಾಮಿ, ತರಗನಹಳ್ಳಿ ನಂಜುಂಡಸ್ವಾಮಿ, ಮಾದಪ್ಪ, ಸಿದ್ದಪ್ಪ, ರಾಜಪ್ಪ, ಪರಶಿವಮೂರ್ತಿ, ಜಯಕುಮಾರ್, ಮುಂತಾದವರು ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296