ಔರಾದ: ಸಮರ್ಪಕ ಬಸ್ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಔರಾದ (ಘಟಕ ) ವ್ಯವಸ್ಥಾಪಕರಿಗೆ ಸೋಮವಾರ ಔರಾದ ತಾಲೂಕು ಪಂಚ ಗ್ಯಾರಂಟಿ ಯೋಜನೆ ಸದಸ್ಯ ಚಂದು ಡಿ.ಕೆ., ದತ್ತಾತ್ರಿ ಬಾಪೂರೆ ಮನವಿ ಸಲ್ಲಿಸಿದರು.
ತೆಲಂಗಾಣ ಗಡಿ ಗ್ರಾಮಗಳಾದ ಜಂಬಗಿ, ಮಹಾರಾಜವಾಡಿ, ಚಿಕ್ಲಿ (ಜೆ ) ವಡಗಾಂವ, ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಭಾಗದ ಜನರಿಗೆ ಅನುಕೂಲ ವಾಗುವಂತೆ ನೈಟ್ ಹಾಲ್ಟ್ ಬಸ್ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ( ಜನಸ್ಪಂದ ಕುಂದು ಕೊರತೆ ಸಂಖ್ಯೆ 209782 ವಿಭಾಗದಲ್ಲಿ ತಿಳಿಸಲಾಗಿತ್ತು. ಆದರೆ, ಅವರಿಂದ ಯಾವುದೆ ಸ್ಪಂದನೆ ದೊರೆಯದ ಕಾರಣ, ಸೋಮುವಾರ ಘಟಕ ವ್ಯವಸ್ಥಾಪಕರಿಗೆ ಲಿಖಿತ ಮನವಿಪತ್ರ ಸಲ್ಲಿಸಿದರು.
ಸಂಜೆ 5 ಗಂಟೆ ನಂತರ ಸಂತಪುರ್ ನಿಂದ ತಾಲೂಕಿನ ಗಡಿ ಗ್ರಾಮಗಳಾದ ಜಂಬಗಿ, ವಡಗಾಂವ್, ಚಿಕ್ಲಿ, ಮಹಾರಾಜವಾಡಿ, ವಿವಿಧ ಥಾಂಡಗಳಿಗೆ ಇತರೆ ಹಳ್ಳಿಗಳಿಗೆ ಹೋಗ್ಬೇಕಾದ್ರೆ ಯಾವುದೇ ಬಸ್ ಇಲ್ಲ, ಸಂಜೆ ಆದ್ರೆ ಸಾಕು ಯಾವದೇ ಖಾಸಗಿ ವಾಹನ ಕೂಡ ಸಿಗುದಿಲ್ಲ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಬೇಕೆಂದು ಬೇಡಿಕೆಯಿಡಲಾಯ್ತು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q