ಶಿವಮೊಗ್ಗ: ಜಾಗತೀಕರಣದ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಧರ್ಮ– ಸಂಸ್ಕೃತಿ- -ಸಂಸ್ಕಾರಗಳು ಮರೆಯಾಗುತ್ತಿದ್ದು, ಲೋಕದ ಜ್ಞಾನವೇ ಅವರಲ್ಲಿ ಕಾಣ ಬರುತ್ತಿಲ್ಲ,ಇಂದು ಧರ್ಮದ ಉಳಿವಿಗೆ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಅಗತ್ಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಅವರಿಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಶ್ರೀ ಕ್ಷೇತ್ರ ಹೊಂಬುಜ ಜ್ಜೈನಮಠದಲ್ಲಿ ನಡೆದ ಇಂದ್ರಧ್ವಜ ಆರಾಧನೆ ಹಾಗೂ ಮುನಿಶ್ರೀ ಶಾಂತಿ ಸಾಗರ ಮಹಾರಾಜರ ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕ ಕಾರ್ಯಗಳ ಆಚರಣೆಯಿಂದ ದಿಗಂಬರ ಪರಂಪರೆ ಮುಂದುವರೆಯಲು ಸಾಧ್ಯ ಎಂದ ಅವರು, ಪ್ರಪಂಚಿಕ ಜ್ಞಾನ ದೂರ ದೃಷ್ಟಿಯಿಂದ ಇಂದು ಪರಂಪರೆ ಉಳಿದಿದೆ, ಶಾಂತಿ ಸಾಗರ್ ಮಹಾರಾಜರು ತ್ಯಾಗದ ಮೂಲಕ ಮನುಚ್ಚರಿಯೇಗೆ ಹೆಚ್ಚಿನ ಹೊತ್ತು ನೀಡಿದರು , ಅವರ ಸವಿನೆನಪಿಗಾಗಿ ಈಗ ಅಂಚೆ ಚೀಟಿ ಬಂದಿದೆ ಎಂದು ಅವರು, ನಾನು ಹಳೆ ವಸ್ತುಗಳನ್ನ ಸಂಗ್ರಹಿಸಿ ನಮ್ಮ ವಸ್ತು ಸಂಗ್ರಹಾಲಯದಲ್ಲಿ ಇಡುತ್ತೀನಿ ಈ ಅಂಚೆಚೀಟಿ ಮನೆ ಮನೆಗೆ ತಲುಪುವುದರಿಂದ ಆರಾಧಿಸ ಪಡುತ್ತಾರೆ ಎಂದರು.
ಸಮಾಜದಲ್ಲಿ ಧರ್ಮದ ಉಳಿವಿಗೆ ಉದ್ದೇಶವಿರಬೇಕು ಶಾಂತಿ, ಸಹನೆ, ತಾಳ್ಮೆ ಅಗತ್ಯ ಎಂದು ವೀರೇಂದ್ರ ಹೆಗ್ಗಡೆ, ಶಾಂತಿ — ಅಹಿಂಸೆ ಜೈನ ಧರ್ಮದ ಮೂಲ ತತ್ವಗಳಾಗಿವೆ ಎಂದರು.
ಮಕ್ಕಳಿಗೆ ಸಂಸ್ಕಾರ ನೀಡುತ್ತಿರುವುದು ಸಂತಸ ತಂದಿದೆ, ವಿದ್ಯೆ ಹಾಗೂ ಧಾರ್ಮಿಕ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಶ್ರೀ ಕ್ಷೇತ್ರ ಗಳ ರಕ್ಷಣೆಗೆ ನಮ್ಮ ಎಲ್ಲಾ ಜವಾಬ್ದಾರಿ ಇದ್ದು, ಸದಾ ಹೋರಾಟಕ್ಕೆ ಸಿದ್ಧವಿರುವುದಾಗಿ ತಿಳಿಸಿದರು.
ಭಾರತೀಯ ಅಂಚೆ ಇಲಾಖೆ ಅಧಿಕಾರಿ ಎಸ್. ರಾಜೇಂದ್ರ ಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಜೈನ ಸಂಬಂಧಿತ ಸ್ಥಾಪಿಸುವ ಅಂಚೆ ಚೀಟಿಗಳನ್ನು ಸಾವಿರ 1981ರಲ್ಲಿ ಗೋಮಟೇಶ್ವರ ಮೂರ್ತಿ, 2001ರಲ್ಲಿ ಚಂದ್ರಗುಪ್ತ ಮೌರ್ಯ, 2023ರಲ್ಲಿ ರಾಣಿ ಅಬ್ಬಕ್ಕದೇವಿ, 2024ರಲ್ಲಿ ಶಾಂತಿ ಸಾಗರ್ ಮಹಾರಾಜರ ಅಂಚೆ ಚೀಟಿಯನ್ನು ತರಲಾಗಿದೆ. ಪ್ರವಾಸಿ ತಾಣಗಳ ಮುದ್ರಿತ ಒಂಭತ್ತು ಅಂಚೆ ಚೀಟಿಗಳಿವೆ. ಹಾಗೂ ಇವರ ಭಾವಚಿತ್ರದ ಪೋಸ್ಟ್ ಕಾರ್ಡುಗಳನ್ನು ಬಿಡುಗಡೆ ಮಾಡಿದೆ ಎಂದರು.
ಶ್ರೀ ಕ್ಷೇತ್ರ ಸೊಂದ ದಿಗಂಬರ ಜೈನಮಠದ ಸ್ವಸ್ತಿ ಶ್ರೀ ಭಟ್ಟ ಅಕಳಂಕ ಭಟ್ಟರಕ ಸ್ವಾಮಿಗಳು ಮಾತನಾಡಿ, ಯಾವುದೇ ಧರ್ಮ ಕಾರ್ಯದಲ್ಲಿ ಮೌನವೃತ ಅಗತ್ಯ, ಸಾಂಸಾರಿಕ ವಿಷಯಗಳನ್ನು ಹಾಗೂ ಕಂದ ಮೂಲಗಳನ್ನು ತ್ಯಾಗ ಅಗತ್ಯ, ಪೂಜೆ- ಜಪ–ತಪ ಅಗತ್ಯ ಎಂದರು.
ಶ್ರೀ ಕ್ಷೇತ್ರ ಅರಿಹಂತಗಿರಿ ಜೈನಮಠದ ಸ್ವಸ್ತಿ ಶ್ರೀ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮಧ್ಯ ಲೋಕದ 458 ಜಿನಾ ಲಯಗಳಿಗೆ ಪೂಜೆ ನಡೆಯಲಿದೆ ಆಕೃತಿಮಾ ಸ್ವಯಂ ಜಿನ ಬಿಂಬಗಳ ಪೂಜೆ ನಡೆಯಲು ಜಿನ ಬಿಂಬ ಗಳು 108 ಅಡಿ ಎತ್ತರವಿರುತ್ತದೆ ಎಂದರು.
ಪಾವನ ಸನ್ನಿಧಿ ವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಇಂದ್ರನಿಂದ ಆರಾಧಿಸುವುದಕ್ಕೆ ಇಂದ್ರಾರಾಧನೆ ಎನ್ನುತ್ತಾರೆ ಇಂದ್ರಧ್ವಜ ದಕ್ಷಿಣ ಭಾರತದಲ್ಲಿ ದೊಡ್ಡ ಆರಾಧನೆಯಾಗಿದೆ . ಈ ಆರಾಧನೆಯನ್ನು ಗಣನಿ ಆರ್ಯಕ ಶಿವಮತಿ ಮಾತಾಜಿಯವರ ಆಶಯ ದಂತೆ ಮಾಡಲಾಗಿದೆ, ಇದು ಶ್ರವಣಬೆಳಗೊಳದ ಹಿಂದಿನ ಪೀಠಾಧ್ಯಕ್ಷರಾದ ದಿವಂಗತ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಆಶಯ ಆಗಿತ್ತು ಎಂದು ಅವರು, ಕೆಲವರು ದೊಡ್ಡ ದೊಡ್ಡ ಆರಾಧನೆಗಳನ್ನು ಕೊಡಿಗೆಯಾಗಿ ನೀಡಿದ್ದಾರೆ ಇದು ಅರಿಹಂತ ಶ್ರೀಗಳಿಗೆ ಸಲ್ಲುತ್ತದೆ ಎಂದ ಭಟ್ಟರಕ ಶ್ರೀಗಳು ತಮಿಳುನಾಡಿನಲ್ಲಿ ಜೈನ ಧರ್ಮದ ಉಳಿವು ಬೆಳವಣಿಗೆಗೆ ಶ್ರೀಗಳ ಕೊಡುಗೆ ಅಪಾರ ಎಂದರು.
ಸಮಾಜದಲ್ಲಿ ಶಾಂತಿ ಸೌಹಾರ್ದ ನೆಲೆಸಲು ಭಟ್ಟರ ಕರ ಪಾತ್ರ ಮಹತ್ವದ್ದು ಸಮಾಜದ ರಕ್ಷಣೆಗೆ ಇನ್ನೂ 15 ಜನ ಭಟ್ಟರಕರ ಅಗತ್ಯವಿದ್ದು, ಹೊಸಮಠ ಸ್ಥಾಪನೆಗಿಂತ ಪುರಾತನ ವಾದ ಮಠಗಳ ಮರುಸ್ಥಾಪನೆ ಅಗತ್ಯ ಈ ಬಗ್ಗೆ ದವಳ ಕೀರ್ತಿ ಭಟರಕ ಶ್ರೀಗಳು ಆಸಕ್ತಿ ವಹಿಸಬೇಕಿದೆ ಎಂದರು.
ಧರ್ಮದಲ್ಲಿ ಸರಿಯಾಗಿ ನಡೆದರೆ ಮುಂದಿನ ಪೀಳಿಗೆ ತಲುಪಬಹುದು ವ್ಯಕ್ತಿಗಿಂತ ಸಮಾಜದ ಬೆಳವಣಿಗೆ ಅಗತ್ಯ ಎಂದ ಬಟ್ಟಾರಕ ಶ್ರೀಗಳು, ತ್ಯಾಗಿ ಗಳನ್ನು ಗೌರವಿಸುವುದು ಅಗತ್ಯ, ಯುವಕರಿಂದ ಧರ್ಮ ಉಳಿಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟರಕ ಶ್ರೀಗಳು ,ಕಂಬದಹಳ್ಳಿ ಜೈನಮಠದ ಸ್ವಸ್ತಿ ಶ್ರೀ ಭಾನು ಕೀರ್ತಿ ಭಟ್ಠರಕ ಶ್ರೀಗಳು, ಆರ್ಯಕ ಶ್ರೀ ಶಿವಮತಿ ಮಾತಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಡಂಬೈಲ್ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರ ರಾಜೇಂದ್ರ ಜೈನ , ವಿಮಲ್ ತಾಳಿಕೋಟೆ, ರಾಜೇಂದ್ರ ಬೀಳಗಿ, ವಿಕಾಸ ಜೈನ್, ಸುಹಾಸ್ ಜವಳಿ, ಸಂದೇಶ್ ಮಹದೇವಪ್ಪ, ಮಹಾವೀರ್ ಕುಂದುರ್ , ಆರ್.ಟಿ.ತವನಪ್ಪ, ಸಿ.ಡಿಅಶೋಕ್ ಕುಮಾರ್ , ಸಚಿನ್ ಸಿಂಗವಿ, ವಿನೋದ್ ದೊಡ್ಡಣ್ಣ , ಡಾ ಜೀವoದರ್ ಕುಮಾರ್, ಪ್ರಕಾಶ್ ಮ್ಯಾಗ್ಡಂ, ದೇವೇಂದ್ರ, ಜಿ.ಬಿ.ಪದ್ಮನಾಭಯ್ಯ, ಅನಿಲ್ ಸೇಥಿ, ಡಾ. ಜೀವನ್ಧರ್ ಜೈನ್, ಅಶೋಕ್ ಸೇಟಿ, ಪ್ರಮೋದ್ ಕುಮಾರ್ ಜೈನ್, ಉದಯ್ ದಡೋತಿ, ಪಾರ್ಶ್ವನಾಥ ದವಳಗೆರೆ , ಅಭಯ ಸುಜಿ, ಇಸ್ರೋ ಅಜಿತ್, ಶಾಂತಿನಾಥ ಮಹಿಳಾ ಸಂಘ ಹೊಂಬುಜ, ಶಿವಮೊಗ್ಗ ,ಹುಬ್ಬಳ್ಳಿ ಜೈನ ಮಹಿಳಾ ಸಂಘಟನೆಗಳು ,ಅಂಚೆ ಇಲಾಖೆ, ಜೈನ ಸಮಾಜದ ಗಣ್ಯರುಗಳು ಸೇರಿದಂತೆ ಶ್ರಾವಕ ಶ್ರಾವಕಿಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಮಹೇಂದ್ರ ಸಿಂಗ್ಬಿ ಅಂಚೆಚೀಟಿ ಬಗ್ಗೆ ಮಾಹಿತಿ ನೀಡಿದರು. ಹೊಂಬುಜ ಜೈನ ಮಠದ ಆಡಳಿತ ಅಧಿಕಾರಿ ಸಿ.ಡಿ. ಅಶೋಕ್ ಕುಮಾರ್ ವಂದಿಸಿದರು. ದಿಗಂಬರತ್ವದ ಪ್ರಚಾರ ಮಾಡಿದ ಶಾಂತಿ ಸಾಗರ್ ಮಹಾರಾಜರ ಸವಿ ನೆನಪಿಗೆ ಅಂಚೆಚೀಟಿ ತರಲಾಗಿದೆ .
ವರದಿ: ಜೆ. ರಂಗನಾಥ, ತುಮಕೂರು.


