ವಿದ್ಯಾರ್ಥಿಗಳ ಜೊತೆಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಅಮೆರಿಕಾದ ಮಿಸೌರಿಯ ಡಿಕ್ಸನ್ ಸ್ಕೂಲ್ ಡಿಸ್ಟ್ರಿಕ್ಟ್ನ 30 ವರ್ಷದ ಮಾಜಿ ಶಿಕ್ಷಕಿ ಕ್ಯಾರಿಸ್ಸಾ ಜೇನ್ ಸ್ಮಿತ್ ಳನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ವಿದ್ಯಾರ್ಥಿಗಳಿಗೆ ಈಕೆ ಹಣ, ಮದ್ಯ, ಮಾದಕ ವಸ್ತುಗಳನ್ನು ನೀಡುತ್ತಿದ್ದಳು ಎನ್ನುವ ಆರೋಪ ಕೂಡ ಈಕೆಯ ಮೇಲಿದೆ.
ಆಗಸ್ಟ್ 2023 ಮತ್ತು ಸೆಪ್ಟೆಂಬರ್ 2024 ರ ನಡುವೆ ಸಂಭವಿಸಿವೆ ಈ ಘಟನೆ ನಡೆದಿತ್ತು. ಈಗಾಗಲೇ ಮದುವೆಯಾಗಿರುವ ಸ್ಮಿತ್, ಲೈಂಗಿಕತೆಯನ್ನು ಹೊಂದಲು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಮತ್ತು ಇತರ ಸ್ಥಳಗಳಿಗೆ ಆಹ್ವಾನಿಸುತ್ತಿದ್ದಳು ಎಂದು ಅಲ್ಲಿನ ಮಾಧ್ಯಮಗಳ ವರದಿ ಮಾಡಿವೆ.
ಸ್ನ್ಯಾಪ್ ಚಾಟ್ ಮೂಲಕ ತನ್ನ ನಗ್ನ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದ ಈಕೆ 100 ಡಾಲರ್ ಅಥವಾ ಗಾಂಜಾ ಕಳಿಸುತ್ತಿದ್ದಳಂತೆ. ಡಿಕ್ಸನ್ ಹೈಸ್ಕೂಲ್ಗೆ ಆಕೆಯ ರಾಜೀನಾಮೆ ಆಗಸ್ಟ್ 2024 ರಲ್ಲಿ ಬಂದಿದ್ದು ಪ್ರಸ್ತುತ, ಆಕೆಯ ಮೇಲೆ ಒಟ್ಟು 19 ಅಪರಾಧಗಳ ಆರೋಪವಿದೆ.
ಅತ್ಯಾಚಾರ, ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ, ಲೈಂಗಿಕ ದುರ್ನಡತೆ, ವೇಶ್ಯಾವಾಟಿಕೆಯನ್ನು ಪೋಷಿಸುವ ಮತ್ತು ಮಗುವನ್ನು ಲೈಂಗಿಕವಾಗಿ ಬಳಸಿಕೊಂಡ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q