ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಮಿಂಚಿದ್ದ ಲಾಯರ್ ಜಗದೀಶ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರಂತೆ. ಆದ್ರೆ ಈ ಬಾರಿ ರಾಷ್ಟ್ರಮಟ್ಟದಲ್ಲಿ ಜಗದೀಶ್ ಮಿಂಚಲಿದ್ದಾರೆ ಅಂತ ಹೇಳಲಾಗಿದೆ.
ಈ ಬಗ್ಗೆ ಲಾಯರ್ ಜಗದೀಶ್ ಅವರೇ ವಿಡಿಯೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹಿಂದಿ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಬಗ್ಗೆ ಲಾಯರ್ ಜಗದೀಶ್ ಅವರೇ ಮಾತನಾಡಿದ್ದಾರೆ.
ನಾನು ಇಷ್ಟರಲ್ಲೇ ಹಿಂದಿ ಬಿಗ್ ಬಾಸ್‌ಗೆ ಹೋಗ್ತಾ ಇದ್ದೀನಿ ಅಂತ ಲಾಯರ್ ಜಗದೀಶ್ ಅವರೇ ಹೇಳಿಕೊಂಡಿದ್ದಾರೆ. ಕರ್ನಾಟಕದ ಹಲವು ಗಣ್ಯರು ಬಾಲಿವುಡ್‌ಗೆ ಎಂಟ್ರಿಕೊಟ್ಟು ಮಿಂಚಿದ್ದಾರೆ. ಆ ಅದೃಷ್ಟ ಈಗ ನನ್ನನ್ನೂ ಹುಡುಕಿಕೊಂಡು ಬಂದಿದೆ. ಕರ್ನಾಟಕದಿಂದ ಪ್ರಕಾಶ್ ರಾಜ್, ಐಶ್ವರ್ಯಾರೈ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಈಗಾಗಲೇ ಹಲವರು ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಇದೀಗ ನನಗೂ ಆ ಅವಕಾಶ ಸಿಕ್ಕಿದೆ. ನಾನೂ ಸಹ ಬಾಲಿವುಡ್ ನಲ್ಲಿ ಮಿಂಚಲಿದ್ದೇನೆ ಅಂತ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಿಂದ ಆಫರ್ ಬಂದಿದೆ ಅದರ ಬಗ್ಗೆ ಡಿಸ್ಕಷ್ನ್ ನಡಿತಿದೆ. ಸೋಮವಾರವೇ ಇದು ಅಂತಿಮವಾಗುವ ಸಾಧ್ಯತೆ ಇದೆ ಅಂತ ಲಾಯರ್ ಜಗದೀಶ್ ಅವರು ಹೇಳಿಕೊಂಡಿದ್ದಾರೆ.
ಇಲ್ಲಿಯವರೆಗೆ ಬಿಗ್ ಬಾಸ್ ಕಥೆ ಕಿಚ್ಚ ಸುದೀಪ್ ದಾದ & ಜಗ್ಗು ದಾದಾ ಜೊತೆ ಆಗಿತ್ತು. ಇನ್ಮೇಲೆ ಬಾಲಿವುಡ್ ಕಥೆ ಸಲ್ಮಾನ್ ಖಾನ್ ವಿತ್ ಜಗ್ಗು ದಾದ ಜೊತೆ ಅಂತ ಆಗಲಿದೆ. ನಾನು ಈಗ ಕೋಟಿಗಳನ್ನು ಎಣಿಸುವಲ್ಲಿ ಬ್ಯೂಸಿಯಾಗಿದ್ದೇನೆ. ಸರ್ಕಾರಿ ನೌಕರರಿಗೂ ಕೈತುಂಬಾ ದುಡ್ಡು ಕೊಡ್ಬೇಕು ಅನ್ನೋದು ನನ್ನ ಆಸೆಯಾಗಿದೆ ಅಂತ ಅವರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


