ಮೂಡುಬಿದರೆ: ತುಳುನಾಡಿನ ಸಾಂಸ್ಕೃತಿಕ ಪರಂಪರೆಗೆ ಜೈನ ಅರಸರ ಕೊಡುಗೆ ಅಪಾರವಾಗಿದೆ, ಅವರ ಸ್ವಾಭಿಮಾನದ ಚಿಂತನೆಗಳು ಇಂದು ಸಹ ತುಳುನಾಡಿಗೆ ಆದರ್ಶವಾಗಿವೆ ಎಂದು ಹಿರಿಯ ಚಿಂತಕ ಡಾ.ಪುಂಡಿ ಕಾಯಿ ಗಣಪಯ್ಯ ಭಟ್ ಅಭಿಪ್ರಾಯ ಪಟ್ಟರು.
ಅವರಿಂದು ಮೂಡುಬಿದರೆ ಜೈನ ಮಿಲನ್ ಆಶ್ರಯದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಳುಪ ಅರಸರ ನಂತರ 15ಕ್ಕೂ ಹೆಚ್ಚು ಸ್ಥಳೀಯ ರಾಜ ಮನೆತನಗಳು ಬೀಡು ಬಲ್ಲಾಳರು ತುಳುನಾಡಿನ ಸ್ವಾಭಿಮಾನಕ್ಕೆ ಧಕ್ಕೆ ಯಾಗದ ರೀತಿಯಲ್ಲಿ ಆಡಳಿತ ನಡೆಸಿದರು. ಕೆಳದಿ ಅರಸರ ರೊಂದಿಗಿನ ಸಂಘರ್ಷದ ನಡುವೆಯೂ ಸಂಸ್ಕೃತಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಕೆಲ ರಾಜಿ ಒಪ್ಪಂದಗಳ ಮೂಲಕ ಯಾವುದೇ ಸಂಘರ್ಷ, ರಕ್ತಪಾತಕ್ಕೆ ಅವಕಾಶ ನೀಡದೆ ಶ್ರಮಿಸಿದರು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾತ್ ಬಲ್ನಾಡು ಮಾತನಾಡಿ, ಸುಳ್ಯ ಭಾಗದಲ್ಲಿ ಉಳಿದಿರುವ ಜೈನ ಬಸದಿಗಳನ್ನು ಸಂರಕ್ಷಿಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂಡುಬಿದರೆ ಜೈನ್ ಮಿಲನ್ ಅಧ್ಯಕ್ಷ ಅನಡ್ಕ ದಿನೇಶ್ ಕುಮಾರ್, ವೀಣಾ ರಘು ಚಂದ್ರಶೆಟ್ಟಿ ,ಅಭಯ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಜಯರಾಜ ಕಂಬಳಿ, ಸಂಪತ್ ಸಾಮ್ರಾಜ್ಯ ಭಾಗವಹಿಸಿದ್ದರು.
ಚಿನ್ಮಯಿ ಪ್ರಾರ್ಥಿಸಿದರು. ಡಾ.ಬಿ.ಪಿ.ಸಂಪತ್ ಕುಮಾರ್ ಸ್ವಾಗತಿಸಿದರು. ಅಪೇಕ್ಷ ಕಾರ್ಯಕ್ರಮ ನಿರೂಪಿಸಿದರು. ಅನಂತ್ ವೀರ ಜೈನ ವರದಿ ವಾಚಿಸಿ, ವಂದಿಸಿದರು. ಪುಷ್ಪರಾಜು ಜೈನ್ ಅತಿಥಿಗಳನ್ನು ಪರಿಚಯಿಸಿದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296