ಎವರ್ ಗ್ರೀನ್ ಹಾಡುಗಳ ಸರದಾರ, ಮ್ಯೂಜಿಕ್ ಮಾಂತ್ರಿಕ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್ ರೆಹಮಾನ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸಾಯಿರಾ ಬಾನು ಅವರು ಎ.ಆರ್ ರೆಹಮಾನ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ.
ಸುದೀರ್ಘ 29 ವರ್ಷಗಳ ದಾಂಪತ್ಯ ಪಯಣದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನವೆಂಬರ್ 19ರಂದು ಏಕಾಏಕಿ ಇಬ್ಬರೂ ದೂರವಾಗುವ ಸುದ್ದಿಯನ್ನು ನೀಡಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸಾಯಿರಾ ಬಾನು ಅವರಿಂದ ಎ.ಆರ್ ರೆಹಮಾನ್ ಅವರು ದೂರವಾಗುತ್ತಿರುವುದು ಡಿವೋರ್ಸ್ ಪಡೆದುಕೊಳ್ಳುತ್ತಿರುವುದು ಇದೀಗ ಅಧಿಕೃತವಾಗಿದೆ. ಡೈವೋರ್ಸ್ನ ಬಗ್ಗೆ ಎ.ಆರ್ ರೆಹಮಾನ್ ಟ್ವೀಟ್ ಮಾಡಿ ಮನದ ನೋವನ್ನು ಹಂಚಿಕೊಂಡಿದ್ದಾರೆ.
ನಾವಿಬ್ಬರೂ ಅನ್ಯೂನ್ಯವಾಗಿ 30 ವರ್ಷದ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಕನಸು ಕಂಡಿದ್ದೆವು. ಆದರೆ, ಇದೆಲ್ಲವೂ ಅನಿರೀಕ್ಷಿತ ಅಂತ್ಯ ಕಂಡಿದೆ ಎಂದೆನಿಸುತ್ತದೆ ಎಂದು ರೆಹಮಾನ್ ಹೇಳಿದ್ದಾರೆ. ಮುಂದುವರಿದು, ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ (ದೇವರಿಗೂ ಮರುಕ ಹುಟ್ಟಿರಬಹುದು) ಅಲುಗಾಡಿರಬಹುದು. ಆದರೆ, ಈ ಬಿರುಕಿನ ಪರಿಸ್ಥಿತಿಯಲ್ಲಿ ಒಡೆದ ಹೃದಯಗಳು ಮತ್ತೆ ಸೇರಲು ಸಾಧ್ಯವಿಲ್ಲ.
ನಾವೇ ಅದಕ್ಕೊಂದು ಅರ್ಥವನ್ನು ಕಂಡುಕೊಳ್ಳುತ್ತೇವೆ. ಒಡೆದಿರುವ ತುಣುಕುಗಳು ಮತ್ತೆ ಒಂದಾಗಲು ಸಾಧ್ಯವಿಲ್ಲ. ನನ್ನೆಲ್ಲ ಸ್ನೇಹಿತರಿಗೂ ಈ ಸಮಯದಲ್ಲಿ ನಮ್ಮೊಂದಿಗೆ ಇರುವುದಕ್ಕೆ ಹಾಗೂ ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296