ತುಮಕೂರು: ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯ ಘಟಕ ಹಾಗೂ ತುಮಕೂರು ಜಿಲ್ಲಾ ಘಟಕವು ಇದೇ ಪುಥಮ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನವೆಂಬರ್ 24ರಂದು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸ ಮಾಡಲಿರುವ ಕ್ರೀಡಾ ಜ್ಯೋತಿಗೆ ಸಚಿವ ಪರಮೇಶ್ವರ್ ಇಂದು ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಹೊರಟ ಕ್ರೀಡಾ ಜ್ಯೋತಿ ಹೊತ್ತ ವಾಹನವನ್ನು ಚಾಲನೆ ಮಾಡುವ ಮೂಲಕ ಚಾಲನೆ ನೀಡಿದ ಸಚಿವ ಪರಮೇಶ್ವರ್, ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಅವರು ಬಾವುಟ ಮೂಲಕ ಬೀಳ್ಕೊಟ್ಟರು. ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಪುವಾಸ ಮಾಡಲಿದ್ದು, ಸಹಕಾರ ನೀಡಿ ಯಶಸ್ವಿಗೊಳಿಸಲು ಸಚಿವರು ಇದೇ ವೇಳೆ ಕೋರಿದರು.
ತುಮಕೂರಿನಿಂದ ಹೊರಟ ವಾಹನ ಕುಣಿಗಲ್ ಪಟ್ಟಣ ತಲುಪಿತು. ಕುಣಿಗಲ್ ನಿಂದ ಯಡಿಯೂರು ಮಾಯಸಂದ್ರ ಮೂಲಕ ಮಧ್ಯಾಹ್ನ 1.30 ಕ್ಕೆ ತುರುವೇಕೆರೆ ತಲುಪಲಿದೆ, ತುರುವೇಕೆರೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ನೊಣವಿನಕೆರೆ ಮೂಲಕ ಹೊರಟು ಮಧ್ಯಾಹ್ನ 3ಗಂಟೆಗೆ ತಿಪಟೂರು ನಗರ ತಲುಪಲಿದೆ, ತಿಪಟೂರುನಲ್ಲಿ ಕಾರ್ಯಕ್ರಮ ಮುಗಿಸಿ ಸಂಜೆ 5 ಗಂಟೆಗೆ ಹೊರಟು ಕೆ.ಬಿ.ಕ್ರಾಸ್ ಮೂಲಕ ಗುಬ್ಬಿ ಪಟ್ಟಣಕ್ಕೆ ಕ್ರೀಡ ಜ್ಯೋತಿ ಆಗಮಿಸಿ ಪುವಾಸಿ ಮಂದಿರದಲ್ಲಿ ತಂಗಲಿದೆ.
22 ನವೆಂಬರ್ ರ ಶುಕ್ರವಾರ ಬೆಳಗ್ಗೆ ಗುಬ್ಬಿ ಪಟ್ಟಣದಿಂದ ಆರಂಭವಾಗುವ ಕ್ರೀಡಾ ಜ್ಯೋತಿಯ ಪ್ರವಾಸ ಬೆಳಗ್ಗೆ 11 ಗಂಟೆಗೆ ಗುಬ್ಬಿಯಿಂದ ಹೊರಟು ಕೆ.ಬಿ.ಕ್ರಾಸ್ ಮೂಲಕ ಹಾಯ್ದು 12:30ಕ್ಕೆ ಚಿಕ್ಕನಾಯಕನಹಳ್ಳಿ ತಲುಪಲಿದೆ. ಚಿಕ್ಕನಾಯಕನಹಳ್ಳಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 4 ಗಂಟೆಗೆ ಶಿರಾ ನಗರ ತಲುಪಲಿದೆ, ಶಿರಾ ಕಾರ್ಯಕ್ರಮದ ನಂತರ ಕ್ರೀಡಾ ಜ್ಯೋತಿ ಶಿರಾ, ಮಧುಗಿರಿ ಮೂಲಕ ಪಾವಗಡ ಪಟ್ಟಣ ತಲುಪಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದೆ.
ನವೆಂಬರ್ 23 ಶನಿವಾರ ಬೆಳಗ್ಗೆ 9 ಗಂಟೆಗೆ ಪಾವಗಡ ಪಟ್ಟಣದಲ್ಲಿ ಕಾರ್ಯಕ್ರಮ ನಡೆಯಲಿದೆ, 11 ಗಂಟೆಗೆ ಪಾವಗಡದಿಂದ ಹೊರಡು ಮಿಡಿಗೇಶಿ ಮೂಲಕ ಮಧ್ಯಾಹ್ನ 12:30ಕ್ಕೆ ಮಧುಗಿರಿ ಪಟ್ಟಣಕ್ಕೆ ತಲುಪಲಿದೆ, ಮಧುಗಿರಿಯ ಕಾರ್ಯಕ್ರಮದ ನಂತರ ಮಧ್ಯಾಹ್ನ 2 ಗಂಟೆಗೆ ಹೊರಟು ತುಂಬಾಡಿ ಮೂಲಕ ಕೊರಟಗೆರೆಯ ಪಟ್ಟಣಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದೆ, ಕೊರಟಗೆರೆಯಿಂದ ಸಂಜೆ 5 ಗಂಟೆಗೆ ಹೊರಟು 6 ಗಂಟೆಗೆ ತುಮಕೂರು ನಗರಕ್ಕೆ ಕ್ರೀಡಾ ಜ್ಯೋತಿ ಬರಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296