ತುಮಕೂರು: ಏಕಕಾಲದಲ್ಲಿ ಮೂರು ಚಿರತೆಗಳು ತೋಟದ ಮನೆಯ ಬಳಿ ಆಹಾರ ಅರಸಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಪಾತಗಾನಹಳ್ಳಿ ಗ್ರಾಮದಲ್ಲಿ ಈ ದ್ರಶ್ಯ ಕಂಡುಬಂದಿದ್ದು ಚಿರತೆ ಗುಂಪು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಬೇಟೆ ಹುಡುಕಿ ಬಂದ ಮೂರು ಚಿರತೆಗಳು, ಗ್ರಾಮದ ನಂಜುಂಡಪ್ಪ ಎಂಬುವರ ತೋಟದ ಮನೆ ಬಳಿ ಕಾಣಿಸಿಕೊಂಡಿವೆ.
ದೇವರಾಯ ದುರ್ಗದ ಕಾಡಿನ ತಪ್ಪಲಿನಲ್ಲಿರುವ ಗ್ರಾಮವಾಗಿದ್ದು, ಕಳೆದ ರಾತ್ರಿ ಕಂಡು ಬಂದಿರುವ ಚಿರತೆಗಳ ಹಿಂಡನ್ನು ಸೆರಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296