ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಲದಕುಪ್ಪೇ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಚೇನ್ ಗೇಟ್ ಮುಂಭಾಗದಲ್ಲಿ ಜಾತ್ರಾ ಮಾಳದ ಸಮೀಪದಲ್ಲಿ ಸೋಮವಾರದಂದು ಜಿಲ್ಲಾ ಪಂಚಾಯತ್ ಮೈಸೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ್ ಮಿಷನ್ ಯೋಜನೆ, ಜಿಲ್ಲಾ ಪಂಚಾಯತ್ ಮೈಸೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೈಸೂರು ಹಾಗೂ ಹೆಚ್.ಡಿ.ಕೋಟೆ, ತಾಲ್ಲೂಕು ಭಗೀರಥ ಸಂಸ್ಥೆ ಸಹಕಾರದೊಂದಿಗೆ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವೃತ್ತ ನಿರೀಕ್ಷಕ ಎಂ.ಲಕ್ಷ್ಮೀ ಕಾಂತ್ ಮಾತನಾಡಿ, ಕಾಡಂಚಿನ ಭಾಗದಲ್ಲಿ ಸಾರ್ವಜನಿಕರು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ತಂದಿದ್ದೆ.ಅದನ್ನು ಸದ್ಬಳಕೆ ಮಾಡಿಕೊಂಡು ಸಂಸ್ಥೆಗಳಿಗೆ ಸಹಕಾರ ನೀಡಿ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.
ಪ್ರತಿ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮ ಇಲಾಖೆಯು ಗ್ರಾಮೀಣ ಜನಗಾಗಿ ಜಲ್ ಜೀವನ್ ಮಿಸ್ಸಿಂಗ್ ಯೋಜನೆಯಡಿ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಹಾಗೂ ಶುದ್ಧ ಸುರಕ್ಷಿತ ಕುಡಿಯುವ ನೀರಿನ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಭಗೀರಥ ಸಂಸ್ಥೆ ಮಾಡುತ್ತಿದೆ.ಅವುಗಳನ್ನು ಮಾಹಿತಿ ಶಿಕ್ಷಣ ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಲ್ಲಿರುತ್ತದೆ ಎಂದರು.
ಸಂಸ್ಥೆಯ ಮುಖಂಡ ಗೋಪಾಲ್ ಮಾತನಾಡಿ ಜಗಜೀವನ್ ಮಿಷನ್ ಯೋಜನೆಯ ಸಂಪೂರ್ಣ ಸಮುದಾಯದ ಭಾಗ್ಯದಲ್ಲಿ ನಿರ್ವಹಣೆ ನಗುವ ಯೋಜನೆಯಾಗಿದೆ. ಜಿಲ್ಲೆಯ ಗ್ರಾಮೀಣ ಜನರಿಗೆ ಕಾರ್ಯಾತ್ಮಕ ನಳ ಸಂಪರ್ಕದೊಂದಿಗೆ ಶುದ್ಧ ಹಾಗೂ ಸುರಕ್ಷಿತ ಮತ್ತು ಅಗತ್ಯ ಪ್ರಮಾಣದ ಕುಡಿಯುವ ನೀರಿನ ಸೌಲಭ್ಯ ದೊಂದಿಗೆ ಗ್ರಾಮ ಮಟ್ಟದಲ್ಲಿ ಗ್ರಾಮಸರನ್ನೇ ಒಳಗೊಂಡು ಗ್ರಾಮ ನೀರು ಹಾಗೂ ನೈರ್ಮಲ್ಯ ಸಮಿತಿಗಳನ್ನು ರಚಿಸಿ ಯೋಜನೆ ಅನುಷ್ಠಾನದ ನಂತರವೂ ಜವಾಬ್ದಾರಿಯನ್ನು ವಹಿಸಿ ಕೊಳ್ಳಬೇಕಾಗಿರುತ್ತದೆ ಎಂದರು.
ಜೆಜೆಎಂ ಯೋಜನೆಯ ಗುರಿ ಮತ್ತು ಉದ್ದೇಶ:
- ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ಕುಡಿಯುವ ನೀರಿನ ನಳ ಸಂಪರ್ಕ ಒದಗಿಸುವುದು.
- ಪ್ರತಿ ವ್ಯಕ್ತಿ ಪ್ರತಿದಿನ 55 ಲೀಟರ್ ನೀರು ಒದಗಿಸುವುದು 3.ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ ಒದಗಿಸಲು ಬರಬೇಡಿ ಮತ್ತು ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡುವುದು.
- ಶಾಲೆ ಅಂಗನವಾಡಿ ಕೇಂದ್ರಗಳು ಗ್ರಾಮ ಪಂಚಾಯಿತಿ ಕಟ್ಟಡಗಳು ಆರೋಗ್ಯ ಕೇಂದ್ರಗಳು ಪೋಷಿಕ ಕೇಂದ್ರಗಳು ಹಾಗೂ ಸಮುದಾಯ ಕಟ್ಟಡಗಳಿಗೆ ಕ್ರಿಯಾತ್ಮಕ ನಳ ಸಂಪರ್ಕವನ್ನು ಒದಗಿಸುವುದು.
- ನಳ ಸಂಪರ್ಕ ಕಾರ್ಯವನ್ನು ಮೇಲ್ವಿಚಾರಣೆ ಮಾಡುವುದು.
- ಸಮುದಾಯದಲ್ಲಿ ಸ್ವಯಂ ಪ್ರೇರಿತ ಸ್ಥಳೀಯ ಮಾಲೀಕತ್ವವನ್ನು ಉತ್ತೇಜಿಸಲು ಮತ್ತು ನಗದು ರೀತಿಯ ಅಥವಾ ಸ್ವಯಂ ಪ್ರೇರಿತ ಕಾರ್ಮಿಕರ ಶ್ರಮ ಧಾನದ ಕೊಡುಗೆ ಖಚಿತ ಪಡಿಸುವುದು.
- ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು ಸಬಲೀಕರಣ ಗೊಳಿಸಲು ಅಲ್ಪ ಹಾಗೂ ದೀರ್ಘಾವಧಿಯಲ್ಲಿ ನೋಡಿಕೊಳ್ಳಲು ನಿರ್ಮಾಣದ ಬೇಡಿಕೆಗಳನ್ನು ಕೊಳಾಯಿ ವಿದ್ಯುತ್ ನೀರಿನ ಗುಣಮಟ್ಟ ನಿರ್ವಹಣೆ ನೀರು ಸಂಸ್ಕರಣೇ ಜಲಾನಯನ ರಕ್ಷಣೆ ಕಾರ್ಯಚರಣೆ ಮತ್ತು ನಿರ್ವಹಣೆಗಾಗಿ ಇತ್ಯಾದಿಗಳ ಬೇಡಿಕೆಗಳನ್ನು ಅಭಿವೃದ್ಧಿ ಪಡಿಸುವುದು.
ಈ ಸಂದರ್ಭದಲ್ಲಿ ಹಾದನೂರು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ನಂದೀಶ್ ಕುಮಾರ್, ಇನ್ನೂ ಮುಖಂಡರು ಉಪಸ್ಥಿತರಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q