ತುಮಕೂರು: ರೈಲ್ವೆ ಟ್ರ್ಯಾಕ್ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿರೋ ಘಟನೆ ತುಮಕೂರು ನಗರದ ಶೆಟ್ಟಿಹಳ್ಳಿ ರೈಲ್ವೆ ಅಂಡರ್ಪಾಸ್ ಬಳಿ ನಡೆದಿದೆ.
ಶೆಟ್ಟಿಹಳ್ಳಿ ಅಂಡರ್ಪಾಸ್ ಬಳಿ ಪತ್ತೆಯಾದ ಮೃತದೇಹವು ರುಂಡ–ಮುಂಡ ಬೇರೆ ಬೇರೆಯಾದ ಸ್ಥಿತಿಯಲ್ಲಿ ಬಿದ್ದಿದೆ.
ಮೃತ ವ್ಯಕ್ತಿಯ ಎಡ ಕಾಲು ಹಾಗೂ ಬಲಗೈ ಮುರಿದಿದೆ, ಮೃತನ ಹೊಟ್ಟೆ ಭಾಗದಲ್ಲಿ ತರಚಿರುವ ಗುರುತುಗಳಿವೆ.
ಸ್ಥಳದಲ್ಲಿ ಮೃತ ವ್ಯಕ್ತಿಯ ಪರ್ಸ್, ಮೊಬೈಲ್ ಪತ್ತೆ ಯಾಗಿದ್ದು ಮೃತ ವ್ಯಕ್ತಿ ಚಿತ್ರದುರ್ಗ ಮೂಲದ ಹೆಮ್ಲಾ ನಾಯಕ್ ಎಂದು ಪತ್ತೆಯಾಗಿದೆ. ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296