ಹೆಚ್.ಡಿ.ಕೋಟೆ/ಸರಗೂರು: ಹುಲಿ ದಾಳಿಯಿಂದ ಸಾವಿಗೀಡಾಗಿರುವ ರೈತನ ಕುಟುಂಬಕ್ಕೆ ಪರಿಹಾರ ನೀಡಿದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಒತ್ತಾಯಿಸಿದರು.
ಅವರು ತಮ್ಮ ಬೆಂಬಲಿಗರೊಡನೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ಶವಾಗಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಾಲ್ಲೂಕಿನ ಹೀರೆಹಳ್ಳಿ ಗ್ರಾಮದ ರೈತ ಮರಿಗೌಡ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ವೇಳೆಯಲ್ಲಿ ಹುಲಿ ದಾಳಿ ಮಾಡಿ ಪರಿಣಾಮ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬ ಕಂಗಾಲಾಗಿದ್ದಾರೆ ಎಂದರು.
ಅರಣ್ಯ ಇಲಾಖೆಯವರು ಪರಿಹಾರ ನೀಡಿದೆ ನಂತರವೇ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇಲ್ಲದಿದ್ದರೆ ಮರಣೋತ್ತರ ಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮಹೇಶ್ ಕುಮಾರ್ ಮಧು ಸಿದ್ದರಾಜು ಸಂತೋಷ ಹೂಗರ್ ಸೇರಿದಂತೆ ಮತ್ತಿತರರು ಶಾಸಕರ ಮನವೊಲಿಸಿದ್ದರೂ ಪ್ರಯೋಜನವಾಗಲಿಲ್ಲ. ವೈಯಕ್ತಿಕವಾಗಿ ರೈತ ಕುಟುಂಬಕ್ಕೆ ಅರಣ್ಯ ಇಲಾಖೆ ಆಧಿಕಾರಿಗಳು ಆರ್ಥಿಕ ನೆರವು ನೀಡಿ, ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ, ಕೆಲ ಮುಖಂಡರು ಚಿಕ್ಕಣ್ಣರವರ ಮನವೊಲಿಸಿದ್ದು, ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಪಟೇಲ್, ರಾಜೇಗೌಡ, ನರಸಿಂಹಗೌಡ, ನಾಗನಾಯಕ, ಸೋಮೇಶ್, ನಾಗೇಶ್, ಜಯರಾಮ, ಬಡಗಲಪುರ ವೆಂಕಟೇಶ್, ಶಿವಪ್ಪ, ಯೊಗೇಶ್, ರಾಜೇಶ್ ಚಾಕಹಳ್ಳಿ ಕೃಷ್ಣ ಇನ್ನಿತರರು ಹಾಜರಿದ್ದರು.
ವರದಿ: ಚಂದ್ರ ಹಾದನೂರು