ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಭಾರತ ಚುನಾವಣಾ ಆಯೋಗ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ, ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ತುಮಕೂರಿನ ಗಾಂಧಿ ನಗರದ ಸೆಂಟ್ ಮೇರಿಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಮಂಜುನಾಥ್, ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಸುನೀಲ್ ಕುಮಾರ್ ಹಾಗೂ ಮಂಜುನಾಥಾಚಾರ್ ಉದ್ಘಾಟಿಸಿದರು.
ಪ್ರಬಂಧ ಸ್ಪರ್ಧೆ(ಕನ್ನಡ)ಯಲ್ಲಿ ಹೊರಪೇಟೆ ಚೇತನಾ ವಿದ್ಯಾ ಮಂದಿರದ ರಾಧಾ ಪಿ, ಪ್ರಬಂಧ ಸ್ಪರ್ಧೆ(ಆಂಗ್ಲ)ಯಲ್ಲಿ ತುರುವೇಕೆರೆ ಎಸ್.ಎ.ಸಿ. ಮಯೂರ ವಿದ್ಯಾಲಯದ ಅನನ್ಯ ಎಂ.ಡಿ. ಹಾಗೂ ಭಿತ್ತಿಚಿತ್ರ ಸ್ಪರ್ಧೆದಲ್ಲಿ ಜಿ.ಜೆ.ಸಿ. ವಿದ್ಯಾಸಂಸ್ಥೆಯ ವೈಷ್ಣವಿ ಬಿ.ಎಸ್, ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಣಿಗಲ್ ತಾಲ್ಲೂಕು ಎಸ್.ಪಿ.ಎಸ್.ಹೆಚ್.ಎಸ್ ಗವಿಮಠದ ಮುನಿರತ್ನ.ಕೆ.ಸಿ. ಹಾಗೂ ಧನಲಕ್ಷ್ಮೀ ಕೆ.ಎನ್. ಅವರು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನ ಪೀಠಿಕೆಯ ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಂಜುನಾಥ್ ಮಾತನಾಡಿ, ಮತದಾನದ ಮಹತ್ವ ಹಾಗೂ ಕಡ್ಡಾಯವಾಗಿ ಮತದಾನ ಬಗ್ಗೆ ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುನೀಲ್ ಕುಮಾರ್.ಜಿ ಭಾರತವು ವಿಶ್ವದಲ್ಲೇ ಅತ್ಯಂತ ಬೃಹತ್ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿದ್ದು, ಭಾರತ ಸಂವಿಧಾನವು ಮತದಾನದ ಮೂಲಕ ಸರ್ಕಾರವನ್ನು ರಚಿಸುವ ಹಕ್ಕನ್ನು ಜನತೆಗೆ ನೀಡಿದೆ. ಭಾರತ ಚುನಾವಣಾ ಆಯೋಗದ ಸ್ಥಾಪನೆಯ ನೆನಪಿಗಾಗಿ ಪ್ರತಿವರ್ಷ ಜನವರಿ 25ರಂದು ಮತದಾರರ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೈಂಟ್ ಮೇರಿಸ್ ಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಬಸವರಾಜು, ವಿವಿಧ ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕ ರಾಘವೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx