ತುಮಕೂರು:ಏಕಾಗ್ರತೆಯಿಂದ ಯೋಗಾಭ್ಯಾಸ ಮಾಡಿದರೆ ಯೋಗ ಚೇತನವು ಧ್ಯಾನದ ಮೂಲಕ ಆಧ್ಯಾತ್ಮಿಕತೆಯನ್ನು ಬೆಳೆಸಿ, ಆರೋಗ್ಯಕರ ಮತ್ತು ಸುಸ್ಥಿರ ಸಮಾಜರೂಪಿಸಲು ಸಹಕಾರಿಯಾಗಲಿದೆ ಎಂದು ವಿವಿಯ ಕಲಾ ನಿಕಾಯದ ಡೀನ್ ಪ್ರೊ.ಎಂ.ಕೊಟ್ರೇಶ್ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ ಕಾಲೇಜು ಯೋಗ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಯೋಗವು ಬದುಕಿನ ಭಾಗವಾಗಬೇಕು. ಯೋಗ ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತುದೇಹದ ಕಲ್ಮಶಗಳನ್ನು ಹೋಗಲಾಡಿಸಿ ಹೊಸ ಚೈತನ್ಯವನ್ನು ಸೃಜಿಸುತ್ತದೆ. ದೇಹದಲ್ಲಿನ ಅಸಮತೋಲನವನ್ನು ಸರಿಪಡಿಸಲು ಯೋಗಾಭ್ಯಾಸ ನಿರಂತರವಾಗಿರಬೇಕು ಎಂದರು.
ಸೂರ್ಯ ನಮಸ್ಕಾರದ13 ವ್ಯಾಯಾಮಗಳು ಸ್ನಾಯುಗಳು, ಕೀಲುಗಳು ಮತ್ತುಆಂತರಿಕ ಅಂಗಗಳ ಸರಿಯಾದಕಾರ್ಯನಿರ್ವಹಣೆಗೆಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಯೋಗದಿಂದಆಧ್ಯಾತ್ಮಿಕ ಸತ್ವ ಸಿಗುತ್ತದೆ. ಜೀವನದಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ಅಳವಡಿಸಿಕೊಳ್ಳಲು ಯೋಗವು ಬದುಕಿನ ದಿನಚರಿಯ ಭಾಗವಾಗಬೇಕು.ಇದರಿಂದ ದೇಹ ಮತ್ತು ಮನಸ್ಸುಎರಡೂ ಶಾಂತವಾಗಿರುತ್ತವೆ. ಯಶಸ್ಸನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದರು.
ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಸವರಾಜ್ ಜಿ. ಮಾತನಾಡಿ, ಸ್ಪರ್ಧೆಗಿಂತ ಭಾಗವಹಿಸುವಿಕೆ ಮೌಲ್ಯವನ್ನು ತಿಳಿಸಿದರು.
ಜಿಲ್ಲೆಯ ವಿವಿಧ ಕಾಲೇಜುಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಸೋಮಶೇಖರ್ ಆರ್., ವಿವಿ ಕಲಾ ಕಾಲೇಜಿನ ದೈಹಿಕ ಶಿಕ್ಷಣ ಮತ್ತುಕ್ರೀಡಾ ವಿಭಾಗದ ಉಪನಿರ್ದೇಶಕ ಡಾ. ಸುದೀಪ್‌ಕುಮಾರ್ ಆರ್., ಅಂತಾರಾಷ್ಟ್ರೀಯ ಯೋಗಾಸನ ತೀರ್ಪುಗಾರ ರಾಜೇಶ್ ಆಚಾರ್ಯ, ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx