ಬೆಳಗಾವಿ: ಭಾರತೀಯ ಸಮಾಜದಲ್ಲಿ ಪ್ರಮುಖ ಹಾಗೂ ಪುರಾತನವಾದ ಜೇನು ಸಂಸ್ಕೃತಿ ಸಂಸ್ಕಾರಗಳು ವಿನಾಶದ ಅಂಚಿನಲ್ಲಿದ್ದು, ಇವುಗಳ ಪುನರು ಜೀವನದಲ್ಲಿ ಜಿನ ಭಜನೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಬೆಳಗಾವಿ ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ಉಷಾ ಸಂಜಯ್ ಪಾಟೀಲ್ ತಿಳಿಸಿದರು.
ಅವರಿಂದು ದಕ್ಷಿಣ ಭಾರತ ಜೈನ ಮಿಲನ, ಮಾಣಿಕ್ ಬಾಗ್ ದಿಗಂಬರ್ ಜೈನ್ ಬೋರ್ಡಿಂಗ್, ದಕ್ಷಿಣ ಕನ್ನಡ ಜೈನ್ ಮೈತ್ರಿ ಕೂಟ , ಸೆಂಟ್ರಲ್ ಜೈನ್ ಬೋರ್ಡಿಂಗ್ ಬೆಳಗಾವಿ ಇವರ ಸಹಯೋಗದಲ್ಲಿ ಬೆಳಗಾವಿಯ ಶ್ರೀ ಧರ್ಮನಾಥ ಭವನದಲ್ಲಿ ಭಾರತೀಯ ಜೈನ್ ಮಿಲನ್ ವಲಯ– 8 ರ ಜಿನ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿನ ನಾಮ ಸ್ಮರಣೆ ಗೆ ಆತ್ಮ ಚಿಂತನೆ ಅಗತ್ಯ, ಜಿನ ಸಂಸ್ಕಾರಗಳನ್ನು ಮನೆಮನೆಗೆ ಕೊಂಡಿಯುತ್ತಿದ್ದು, ನಶಿಸುತ್ತಿರುವ ಜಿನಭಜನೆಗೆ ಪುನರುಜ್ಜೀವನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ, ಹೇಮಾವತಿ.ವಿ .ಹೆಗಡೆ ,ಅನಿತಾ ಸುರೇಂದ್ರ ಕುಮಾರ್, ಧರ್ಮಸ್ಥಳ ಸುರೇಂದ್ರ ಕುಮಾರ್ ರವರ ಪರಿಶ್ರಮಗಳು ಮಹತ್ವ ವಾದವು ಎಂದರು.
ಶ್ರೀ ಜೀವಂದರ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಇಂದಿರಾ ಜೀವoದರ ಕುಮಾರ್, ಗುಣ ಪಾಲ ಹೆಗಡೆ, ಪ್ರಶಾಂತ್ ಉಪಾಧ್ಯೇ, ಬಾಳೆಕಾಯಿ, ವೀರೇಂದ್ರ ಕುಮಾರ್, ಮಹಾವೀರ್ ಜೈನ್,ಅಶೋಕ್ ಕಟ್ಟಿ, ಲತಾ ಮಹಾವೀರ್ ಪೂವಾನಿ, ಡಾ. ಉದಯ್ ಪಾಟೀಲ್, ವೀರೇಂದ್ರ ಹೆಗ್ಗಡೆ ಅಜಿತ್ ಕುಮಾರ್ ,ಸುಧಾ ಮರುಗಣ್ಣನವರ್ ಅನಂತ ಮರುಗಣ್ಣನವರ್, ಹುಬ್ಬಳ್ಳಿ ದಿಗಂಬರ್ ಜೈನ್ ಮಹಿಳಾ ಸಮಾಜ ಅಧ್ಯಕ್ಷ ತ್ರಿಶಾಲ ಮಾಲಗುತ್ತಿ, ಸುಜಾತ ಜಿನ ದತ್ತ ಹಡಗಲಿ, ಚಂದನ ಬಿಳಗಿ ಪ್ರಕಾಶ್ ಮುತ್ತಿನ , ಸಂಗೀತ ಉಪದೇ , ಪ್ರೇಮ ಉಪದ್ಯೆ, ಸ್ವಾತಿ ಸುಧಾ ,ದರ್ಶನ್ ಪಡಿಕೆ ಸಂಗೀತ ವಾಚಿಸಿದರು. ಶಶಿಧರ ನರೇಂದ್ರ , ನಿಶ್ಚಯ ವಿಶ್ವಸೇನಾ, ನಿರೀಕ್ಷ ಜೈನ್ ಹೊಸ್ಮರ್, ಜಿನ ಭಜನಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಹಾಗೂ ಜಿನ ಭಜನಾ ಸ್ಪರ್ಧಾ ತೀರ್ಪುಗಾರರನ್ನ ಗೌರವಿಸಲಾಯಿತು. ಡಾ.ಪಿ.ಜಿ.ಕೆಂಪಣ್ಣ ಸ್ವಾಗತಿಸಿದರು.
ಬೆಳಗಾವಿ ಜಿನ ಭಜನಾ ಸ್ಪರ್ಧೆ ಸೀಸನ್– 8
ಧಾರವಾಡ ವಿಭಾಗ.
ಹಿರಿಯರ ವಿಭಾಗ
ಕ್ರಮವಾಗಿ.
1. ಜಿನ ಸಂಕೀರ್ತನ ತಂಡ ಹುಬ್ಬಳ್ಳಿ.
2 ಬೆಳಗಾವಿ ಸಪ್ತಸ್ವರ ತಂಡ.
3 .ದಿವ್ಯ ಧ್ವನಿ ತಂಡ ಹುಬ್ಬಳ್ಳಿ.
ಸಮಾಧಾನಕರ ಬಹುಮಾನಗಳು
ಜಿನ ಶ್ರುತಿ ತಂಡ ಹುಬ್ಬಳ್ಳಿ.
ಶ್ರುತ ಸ್ಥಂದ ಭಜನ ಮಂಡಳಿ .ಬೆಳಗಾವಿ.
ಉತ್ತಮ ಸಮವಸ್ತ್ರ ಕ್ಕೆ ಸುವರ್ಣ ಬಹುಮಾನವನ್ನು ಪ್ರಿಯಾ ಕಾರಣಿ ತಂಡಕ್ಕೆ ನೀಡಲಾಗಿದೆ.
ಕಿರಿಯರ ವಿಭಾಗ
ನಿರಂಜನ ತಂಡ ಬೆಳಗಾವಿ .
ಶ್ರೀ ವಿಶಾರದ ನೃತ್ಯ ಶಾಲೆ ಬೆಳಗಾವಿ .
ಬೆಳಗಾವಿ ಸಹನಾ ಮತ್ತು ತಂಡ .
ಸಮಾಧಾನಕರ ಬಹುಮಾನವನ್ನು
ಅಲಂಕಾರ ತಂಡ ಬೆಳಗಾವಿ .
ಬೆಳಗಾವಿ ಶಾಂತಿ ಸಾಗರ ಪಾಠಶಾಲೆ.
ಉತ್ತಮ ಬಹುಮಾನವನ್ನು
ಪದ್ಮಾವತಿ ಮಹಿಳಾ ಸಮಾಜ
ಶ್ರುತಸ್ಕಂದ ಭಜನಾ ಮಂಡಳಿ ಬೆಳಗಾವಿ. ನೀಡಲಾಗಿದೆ.
ತೀರ್ಪುಗಾರರು.
ಶಶಿಧರ ನರೇಂದ್ರ
ನಿಶ್ಚಯ್ ವಿಶ್ವ ಸೇನಾ.
ನಿರೀಕ್ಷಾ ಜೈನ್ ಹೊಸ್ಮರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx