ನವದೆಹಲಿ: ಅಮೆರಿಕ ಡಾಲರ್ ಎದುರು ಮಂಗಳವಾರ ರೂಪಾಯಿ ಮೌಲ್ಯವು 4 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ 84.76ಕ್ಕೆ ತಲುಪಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಇದಾಗಿದೆ. ಅಮೆರಿಕನ್ ಡಾಲರ್ ಎದುರು ಸೋಮವಾರ ರೂಪಾಯಿ ಮೌಲ್ಯ 12 ಪೈಸೆಯಷ್ಟು ಕುಸಿದು, 184.72ಕ್ಕೆ ತಲುಪಿತ್ತು.
ರಷ್ಯಾ ಮತ್ತು ಚೀನಾ ಕಳೆದ ಕೆಲವು ವರ್ಷಗಳಿಂದ ಡಾಲರ್ ಗೆ ಪರ್ಯಾಯ ಹುಡುಕುತ್ತಿವೆ. ಅಥವಾ ತಮ್ಮದೇ ಆದ ಬ್ರಿಕ್ಸ್ ಕರೆನ್ಸಿಯನ್ನು ತರಲು ಯತ್ನಿಸುತ್ತಿವೆ. ಭಾರತ ಇದುವರೆಗೆ ಈ ಕ್ರಮದ ಭಾಗವಾಗಿಲ್ಲ. ರೂಪಾಯಿ ಅಂತಾರಾಷ್ಟ್ರೀಯವಾಗಲು ಭಾರತ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಆ ಬಿಐ ಮಾಜಿ ಗವರ್ನರ್ ಸುಬ್ಬಾರಾವ್ ಅಭಿಪ್ರಾಯಪಟ್ಟಿದ್ದಾರೆ.
ಕುಸಿತಕ್ಕೆ ಕಾರಣವೇನು?:
ಬ್ರಿಕ್ಸ್ ರಾಷ್ಟ್ರಗಳು ಅಮೆರಿಕದ ಡಾಲರ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರೆ ಆ ದೇಶಗಳ ಆಮದುಗಳ ಮೇಲೆ ಶೇಕಡ 100ರಷ್ಟು ಸುಂಕ ವಿಧಿಸಬೇಕಾಗುತ್ತದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಡಾಲರ್ ಮೌಲ್ಯ ವೃದ್ಧಿಸಿದ್ದರೆ, ರೂಪಾಯಿ ಮೌಲ್ಯ ಇಳಿದಿದೆ. ವಿದೇಶಿ ಬಂಡವಾಳದ ಹೊರಹರಿವು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx