ಸರಗೂರು: ಭಾರತ ದೇಶಕ್ಕೆ ಬಹುದೊಡ್ಡ ಸಂವಿಧಾನದ ಕೊಡುಗೆ ನೀಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುಣ್ಯತಿಥಿ ದಿನ. ಅಂಬೇಡ್ಕರ್ ರವರನ್ನು ಕೇವಲ ಅವರ ಜನ್ಮ ದಿನದಂದು ಮಾತ್ರ ನೆನೆಯದೇ ಅವರ ಪುಣ್ಯ ತಿಥಿ ದಿನವು ಸಹ ನೆನೆದು, ಅವರನ್ನು ಸ್ಮರಿಸಲಾಗುತ್ತದೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು.
ತಾಲೂಕಿನ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 68 ನೇ ವರ್ಷದ ಮಹಾ ಪರಿನಿರ್ವಾಣ ದಿನದಂದು ಅಂಬೇಡ್ಕರ್ ಪೋಟೋ ಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು.
ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ, ಇತರೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳು ಎಂದು ಸಹ ಮಾಸುವುದಿಲ್ಲ ಎಂದರು.
ಬಿ.ಆರ್.ಅಂಬೇಡ್ಕರ್ ರವರು ಮಧ್ಯಪ್ರದೇಶದ ಮೋವ್ ನಲ್ಲಿ 1891 ರ ಏಪ್ರಿಲ್ 14 ರಂದು ಜನಿಸಿದ ಅವರು, ದೇಶಕ್ಕೆ ಹಲವು ಮಹತ್ತರ ಕೊಡುಗೆಗಳನ್ನು ನೀಡಿ, ದೆಹಲಿಯ ತಮ್ಮ ಮನೆಯಲ್ಲಿ ಡಿಸೆಂಬರ್ 6, 1956 ರಂದು 65ನೇ ವರ್ಷದಲ್ಲಿ ನಿಧನರಾದರು. ಆದರೆ ಅವರ ನೆನಪು ಎಂದು ಸಹ ಭಾರತೀಯರಿಗೆ ಮಾಸುವುದಿಲ್ಲ. ಅವರ ಪ್ರಸ್ತುತತೆ ಮರೆಯಾಗುವುದು ಇಲ್ಲ.
ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಹ ಪೂಜ್ಯರೇ ಆಗಿದ್ದಾರೆ. ಅವರ ಈ ಪುಣ್ಯತಿಥಿಯ ದಿನದಂದು ದೇಶದ ಯುವಜನತೆಗೆ ಅವರು ನೀಡಿದ ಕೆಲವು ಕಿವಿಮಾತುಗಳನ್ನು ಘೋಷವಾಕ್ಯಗಳನ್ನು ಇಲ್ಲಿ ತಿಳಿಸಲಾಗಿದೆ.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪುಣ್ಯಸ್ಮರಣೆ ನಾವೆಲ್ಲ ಮಾಡಬೇಕಿದೆ ತಿಳಿಸಿದರು.
ಅದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಭಾರತದ ಸಂವಿಧಾನದ ಶಿಲ್ಪಿ ಡಾ.ಭೀಮ್ ರಾವ್ ಅಂಬೇಡ್ಕರ್ ಪುಣ್ಯತಿಥಿಯ ನೆನಪಿಗಾಗಿ ಮಹಾಪರಿನಿರ್ವಾಣ ದಿವಸ್ ಅನ್ನು ಡಿಸೆಂಬರ್ 6ರಂದು ಆಚರಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಇಂದಿನ ಭಾರತವನ್ನು ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಬೌದ್ಧ ಸಂಪ್ರದಾಯದಲ್ಲಿ, ‘ಪರಿನಿರ್ವಾಣ’ ಎಂದರೆ ಮತ್ತು ತನ್ನ ಜೀವಿತಾವಧಿಯಲ್ಲಿ ಮತ್ತು ಮರಣಾನಂತರ ನಿರ್ವಾಣವನ್ನು ಪಡೆದ ವ್ಯಕ್ತಿಯನ್ನು ಸೂಚಿಸುತ್ತದೆ. ಬಿಆರ್ ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಕರೆಯಲಾಗುತ್ತದೆ, ಏಕೆಂದರೆ ಅವರು ಹಿಂದೂ ಧರ್ಮವನ್ನು ತ್ಯಜಿಸಿದ್ದು, ದೇಶದಲ್ಲಿ ದಲಿತ ಬೌದ್ಧ ಚಳವಳಿಗೆ ಸ್ಫೂರ್ತಿ ನೀಡಿದರು. ಮಹಾಪರಿನಿರ್ವಾಣ ದಿವಸ್ ಬಿ ಆರ್ ಅಂಬೇಡ್ಕರ್ ಅವರು ಭಾರತಕ್ಕೆ ಕಲ್ಪಿಸಿದ ಸಮಾಜದ ಸಮಾನತೆಯನ್ನು ಸೂಚಿಸುತ್ತದೆ ಎಂದರು.
ಪಶು ಸಂಗೋಪನಾ ಸಹಾಯಕ ನಿರ್ದೇಶಕ ವೈ ಡಿ ರಾಜಣ್ಣ.ಕನ್ನಡ ಸಾಹಿತ್ಯ ಪರಿಷತ್ ಪ್ರದಾನ ಕಾರ್ಯದರ್ಶಿ ಗ್ರಾಮೀಣ ಮಹೇಶ್, ಯಶವಂತಪುರ ಶ್ರೀನಿವಾಸ.ಮಾತನಾಡಿದರು.ತಾಲೂಕಿನಾದ್ಯಂತ ಶಾಲೆ ಕಾಲೇಜು ಹಾಗೂ ಗ್ರಾಪಂ ಸರ್ಕಾರಿ ಕಚೇರಿಗಳಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರು ಚಂದ್ರಕಲಾ ರಾಜಣ್ಣ, ಉಮಾ ರಾಮಚಂದ್ರ, ಸಣ್ಣತಾಯಮ್ಮ, ಚೈತ್ರ ಸ್ವಾಮಿ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಿಕ್ಕವೀರನಾಯಯಕ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ದಸಂಸ (ಅಂಬೇಡ್ಕರ್ ವಾದ) ಕೂಡಗಿ ಗೋವಿಂದರಾಜು, ನಾಗೇಂದ್ರ ಮಣಿಕಂಠ, ಕರ್ನಾಟಕ ಭೀಮಾ ಸೇನೆ ತಾಲೂಕು ಅಧ್ಯಕ್ಷ ಮಹೇಂದ್ರ, ಸಣ್ಣಸ್ವಾಮಿ ಸರಗೂರು, ದೊಡ್ಡಯ್ಯ, ಅಂಬೇಡ್ಕರ್ ಟ್ರಸ್ಟ್ ಗೌರವಾಧ್ಯಕ್ಷ ಮನುಗನಹಳ್ಳಿ ತಿಮ್ಮಯ್ಯ, ನಾಗರಾಜು, ಪುಟ್ಟ ಹನುಮಯ್ಯ, ಗ್ರೇಟ್ 2 ತಹಶೀಲ್ದಾರ್ ಪರಶಿವಮೂರ್ತಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ ಕುಮಾರ್, ಸಮಾಜ ಕಲ್ಯಾಣ ಮ್ಯಾನೇಜರ್ ಗೋಪಾಲಕೃಷ್ಣಮೂರ್ತಿ, ಉಪ ತಹಶೀಲ್ದಾರ್ ಸುನೀಲ್, ರವಿಂದ್ರ, ಮುಜೀಬ್, ಸೂರ್ಯ ಕುಮಾರ್, ವೈರಮುಡಿ, ಈಶ್ವರ್ ಲಂಕೆ, ಇನ್ನೂ ಸಿಬ್ಬಂದಿಗಳು ಸೇರಿದಂತೆ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx