ಶಿರಾ: ತಾಲೂಕಿನಲ್ಲಿ ಫ್ಲೋರೈಡ್ ಯುಕ್ತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶುದ್ಧಗಂಗಾ ನೀರಿನ ಘಟಕಗಳನ್ನು ಸ್ಥಾಪಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ್ ಸುವರ್ಣ ತಿಳಿಸಿದರು.
ಪ್ರಕೃತಿ ವೈಪರೀತ್ಯದ ಪರಿಣಾಮ ಕಾಲ ಕಾಲಕ್ಕೆ ಉತ್ತಮ ಮಳೆಯಾಗದೇ ಅಂತರ್ಜಲ ಬತ್ತಿರುವ ಕಾರಣ ರಾಜ್ಯದ ಅನೇಕ ಭಾಗಗಳ ಕೊಳವೆ ಬಾವಿಗಳಲ್ಲಿ ಜನ, ಜಾನುವಾರುಗಳು ಕುಡಿಯಲು ಯೋಗ್ಯವಲ್ಲದ ಫ್ಲೋರೈಡ್ ಯುಕ್ತ ನೀರು ಬರುತ್ತಿದೆ ಎಂದು ಅವರು ಹೇಳಿದರು.
ಫ್ಲೋರೈಡ್ ಯುಕ್ತ ನೀರನ್ನು ಕುಡಿದ ಅನೇಕ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿರುವ ಕಾರಣ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯ ಶುದ್ಧಗಂಗಾ ಘಟಕಗಳನ್ನು ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪನೆ ಮಾಡುವ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇಂತಹ ಶುದ್ಧಗಂಗಾ ನೀರಿನ ಘಟಕಗಳು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಿಲ್ಲಾ ನಿರ್ದೇಶಕರದ ದಿನೇಶ್ ಡಿ. ಮಾತನಾಡಿ, ನಮ್ಮ ಸೇವಾ ಸಂಸ್ಥೆಯ ಸ್ಥಾಪನೆಯನ್ನು ಮಾಡಿರುವ ಶುದ್ಧಗಂಗಾ ನೀರಿನ ಘಟಕ ಅತ್ಯಂತ ಫಲಪ್ರದವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯ ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮಲಿಂಗಪುರ ಗ್ರಾಮ ಪಂಚಾಯತಿ PDO ಮಾರಣ್ಣ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಭುವನೇಶ್ವರಿ ರೇವಣ್ಣ ನವರು ಮಾದೇನಹಳ್ಳಿ ಗ್ರಾಮದ ಸದ್ಯಸ್ಯರಾದ ರತ್ನಮ್ಮ ಲೋಕೇಶ, ರಂಗದಾಮಯ್ಯ ಹಾಗೂ ಗಿರೀಶ್ ಜೆ. ಮತ್ತು ತಾಲೂಕು ಯೋಜನಾಧಿಕಾರಿಗಳ ರಮೇಶ್ ಎನ್. ಶುದ್ಧ ಗಂಗಾ ಮೇಲ್ವಿಚಾರಕರು ವಿರೂಪಾಕ್ಷ, ವಲಯದ ಮೇಲ್ವಿಚಾರಕರು ಪ್ರಮೀಳಾ ಹಾಗೂ ವಲಯದ ಎಲ್ಲ ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಹಾಗೂ ಗ್ರಾಮದ ಸದಸ್ಯರ ಸೇರಿದಂತೆ ಶುದ್ಧಗಂಗಾ ಘಟಕದ ಪ್ರೇರಕರು ಮತ್ತು ಸಿಬ್ಬಂದಿ ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx