ತುಮಕೂರು: ಪರಿಟಾಲ ರವೀಂದ್ರ ಅವರ 17ನೇ ವರ್ಧಂತಿಯನ್ನು ಹೆಲ್ಪ್ ಸೊಸೈಟಿ ಕಾರ್ಯಾಲಯದಲ್ಲಿ ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿರಿಯ ರಾಜಕೀಯ ಮುಖಂಡರಾದ ಮಾನಂ ವೆಂಕಟಸ್ವಾಮಿ, ಪರಿಟಾಲ ರವೀಂದ್ರ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಇದೇ ಸಮಯದಲ್ಲಿ ಪಾವಗಡ ಶಾಂತಿ ಮೆಡಿಕಲ್ ದೇವರಾಜ್ ಮಾತನಾಡಿ, ಪರಿಟಾಲ ರವೀಂದ್ರ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು.
ಪಾವಗಡ ತಾಲ್ಲೂಕು ಜೆಡಿಎಸ್ ರೈತ ಘಟಕದ ಅಧ್ಯಕ್ಷರಾದ ಗಂಗಾಧರ ನಾಯ್ಡು ಅವರು ಮಾತನಾಡಿ, ಪರಿಟಾಲ ರವೀಂದ್ರ ಅವರ ಮೇಲೆ ಇರುವಂತಹ ಅಭಿಮಾನಕ್ಕೆ ಪ್ರಾಂತೀಯತೆ ಇಲ್ಲ, ಜಾತಿ ಭೇದ ಇಲ್ಲ, ಪಕ್ಷ ಭೇದ ಇಲ್ಲ, ಭಾಷಾ ಭೇದ ಇಲ್ಲ ಇವೆಲ್ಲವನ್ನೂ ಮೀರಿ ಎಲ್ಲೆಲ್ಲಿ ತೆಲುಗು ಮಾತನಾಡುತ್ತಾರೆ, ಎಲ್ಲಾ ಕಡೆ ಪರಿಟಾಲ ರವೀಂದ್ರ ಅವರ ಅಭಿಮಾನಿಗಳೇ ಇರುತ್ತಾರೆ. ಅವರು ಬಡವರ ಪರ ಅನ್ಯಾಯಕ್ಕೊಳಗಾದವರ ಪರ ಹೋರಾಡಿ, ತನ್ನ ಪ್ರಾಣವನ್ನೆ ತ್ಯಾಗ ಮಾಡಿದಂತಹ ಮಹನೀಯರು ಎಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆಂಜನೇಯಲು, ನರಸಿಂಹ ಮೂರ್ತಿ, ಮುತ್ಯಾಲ ನಾಯ್ಡು , ಮಾನಂ ಶಶಿಕಿರಣ್, ಪವನ್ ಕುಮಾರ್, ಗೋವಿಂದ, ದಿನೇಶ್ ಕುಮಾರ್, ಸುಮನ್ , ಮೋಹನ್, ಗೌತಮ್, ಭಾಸ್ಕರ್, ಈಶ್ವರ, ಅಭಿ, ಓಬಳೇಶ, ಬಾಲಕೃಷ್ಣ, ತಿರುಮಲೇಶ್ ನಾಯ್ಡು ಮತ್ತು ತಾಲ್ಲೂಕಿನ ಎಲ್ಲಾ ಯುವ ಮುಖಂಡರು ಮತ್ತು ಹಲವು ಪಕ್ಷಗಳ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಮುಂತಾದ ನಾಯಕರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy