ಬೆಂಗಳೂರು: ಪತ್ನಿ ಹಾಗೂ ಆಕೆಯ ಸಂಬಂಧಿಕರು ಸುಳ್ಳು ಪ್ರಕರಣ ದಾಖಲಿಸಿದರಿಂದ ನೊಂದು ಪ್ರತಿಷ್ಠಿತ ಕಂಪೆನಿಯ ಮ್ಯಾನೇಜರ್ ವೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರೆಸ್ಟಿಜ್ ಶಾಂತಿ ನಿಕೇತನದಲ್ಲಿರುವ ಮಹೀಂದ್ರ ಕಂಪನಿಯ ಆರ್ಟಿಫಿಸಿಯಲ್ ಇಂಟಲಿಜೆನ್ಸ್ ವಿಭಾಗದ ಡಿಜಿಎಂ ಸುಭಾಷ್ ಅತುಲ್ (34) ವಿನಾಃಕಾರಣ ಪತ್ನಿ ಹಾಗೂ ಆಕೆಯ ಸಂಬಂಧಿಕರು ಸುಳ್ಳು ಪ್ರಕರಣ ದಾಖಲಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದರಿಂದ ಮನನೊಂದು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಮುನ್ನೆಕೊಳ್ಳಾಲದ ಮಂಜುನಾಥ್ ಲೇಔಟ್ ನ ಡೆಲ್ಫೀನಿಯಂ ಅರ್ಪಾಮೆಂಟ್ ನ ಮೂರನೇ ಮಹಡಿಯ ಪ್ಲಾಟ್ ನಲ್ಲಿ ಅತುಲ್ ಸುಭಾಷ್ ಅವರು ನೆಲೆಸಿದ್ದರು. ಇವರು ಮೂಲತಃ ಉತ್ತರ ಪ್ರದೇಶದವರು.
ನಿನ್ನೆ ಬೆಳಗ್ಗೆ 6 ಗಂಟೆ ವೇಳೆ ತಮ್ಮ ಪ್ಲಾಟ್‌ನ ಬೆಡ್ ರೂಮ್ ನಲ್ಲಿ ಪ್ಯಾನಿಗೆ ಹಗ್ಗದಿಂದ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಹೊಯ್ಸಳ ಕಂಟ್ರೋಲ್ ರೂಮ್‌ಗೆ ದೂರು ಬಂದಿದೆ.ಹೊಯ್ಸಳ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮನೆಯ ಒಳಗಿನಿಂದ ಲಾಕ್ ಆಗಿರುವುದು ಗಮನಿಸಿ ತಕ್ಷಣ ಸ್ಥಳೀಯರ ಸಮುಖದಲ್ಲಿ ಡೋರ್ ಲಾಕ್ ಒಡೆದು ಒಳಗೆ ಹೋಗಿ ನೋಡಿದಾಗ ಮ್ಯಾನೇಜರ್ ಮೃತಪಟ್ಟಿರುವುದು ಕಂಡು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx