ಬೆಂಗಳೂರು: ಬೆಂಗಳೂರಿನ ಆಧುನಿಕ ಬೆಳವಣಿಗೆಗೆ ಎಸ್.ಎಂ. ಕೃಷ್ಣ ಅವರು ಕೊಡುಗೆ ಕೊಟ್ಟಿದ್ದಾರೆ. ಇವರು ಘನತೆ, ಸಜ್ಜನತೆ ತಮ್ಮ ಗಾಂಭೀರ್ಯದಿಂದಲೇ ಹೆಸರಾದವರು. ಎಸ್ಎಂ ಕೃಷ್ಣ ಅವರು ದೂರದೃಷ್ಟಿಯ ರಾಜಕಾರಣಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನ ಕೇಂಪೇಗೌಡ ಏರ್ ಪೋರ್ಟ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ವೈಯುಕ್ತಿಕವಾಗಿ ಬಹಳ ಪ್ರೇರಿತನಾದವನು. ಅವರು ಸಿಎಂ ಆದಾಗ ನಾನು ಹೈಸ್ಕೂಲ್ ನಲ್ಲಿ ಇದ್ದೆ. ಆಗ ರಾಜಕುಮಾರ್ ಅವರ ಕಿಡ್ನಾಪ್ ಆಗಿತ್ತು. ಆ ಸಮಯದಲ್ಲಿ ಎಸ್.ಎಂ.ಕೃಷ್ಣ ಅವರ ನಿರ್ಧಾರಗಳು ಗಮನ ಸೆಳೆದಿದ್ದವು. ಅವರು ಬಹಳ ಸ್ಟೈಲಿಷ್ ರಾಜಕಾರಣಿ. ಬೆಂಗಳೂರು ಐಟಿ ಹಬ್ ಆಗಲು ಎಸ್ಎಂ ಕೃಷ್ಣ ಕಾರಣ. ಇನ್ನು 2019ರಲ್ಲಿ ಬಿಜೆಪಿ ಸೇರಿದ್ರು, ಅದು ನನಗೆ ಸಂತೋಷದ ವಿಚಾರ ಎಂದರು.
ನಾವು ಎರಡು ಮೂರು ದಿನ ಶೋಕಾಚರಣೆ ಮಾಡಿ ಮರೆಯುತ್ತೇವೆ.ಆದರೆ ಎಸ್.ಎಂ.ಕೃಷ್ಣ ಅವರು ಬೆಂಗಳೂರಿಗೆ ಅಪಾರ ಕೊಡುಗೆ ನೀಡಿದ್ದಾರೆ. ಎಸ್ ಎಂಕೆ ಅವರ ಹೆಸರಲ್ಲಿ ಬೆಂಗಳೂರಿಗೆ ಕೊಡುಗೆ ಕೊಡುವ ವ್ಯಕ್ತಿಗಳಿಗೆ ಪ್ರಶಸ್ತಿ ಕೊಡುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx