ನವದೆಹಲಿ: ದೆಹಲಿ ಹಲವು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ ಹಾಕಲಾಗಿದೆ. ಆರ್.ಕೆ. ಪುರಂನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಶಾಲೆಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ.
ಈ ಬಗ್ಗೆ ಕೂಡಲೇ ತನಿಖೆ ಮಾಡಿರುವ ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಹೇಳಿದ್ದಾರೆ. ದೆಹಲಿಯಾದ್ಯಂತ 30 ಶಾಲೆಗಳು ನಕಲಿ ಬಾಂಬ್ ಬೆದರಿಕೆ ಸ್ವೀಕರಿಸಿವೆ ಎಂದು ಆಗ್ನೇಯ ದೆಹಲಿ ಪೊಲೀಸ್ ಉಪ ಆಯುಕ್ತ ರವಿಕುಮಾರ್ ಸಿಂಗ್ ನಿನ್ನೆ ಹೇಳಿದ್ದರು. ಇದಾದ ನಂತರ ಇಂದು ಮತ್ತೆ ಬೆದರಿಕೆ ಬಂದಿದೆ.
ಈ ವಾರದಲ್ಲಿ ಇದು ಮೂರನೇಯ ಘಟನೆಯಾಗಿದೆ. ಡಿಸೆಂಬರ್ 9 ರಂದು, ದೆಹಲಿಯ ಕನಿಷ್ಠ 40 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಕಳುಹಿಸಲಾಗಿತ್ತು, ಪಶ್ಚಿಮ ವಿಹಾರ್ ಮತ್ತು ಡಿಪಿಎಸ್ ಆರ್ ಕೆ ಪುರಂನಲ್ಲಿರುವ ಜಿಡಿ ಗೋಯೆಂಕಾ ಶಾಲೆಯಿಂದ ಬೆದರಿಕೆಗಳು ಬಂದಿದ್ದವು. ಮದರ್ ಮೇರಿಸ್ ಸ್ಕೂಲ್, ಬ್ರಿಟಿಷ್ ಸ್ಕೂಲ್, ಸಲ್ವಾನ್ ಪಬ್ಲಿಕ್ ಸ್ಕೂಲ್, ಕೇಂಬ್ರಿಡ್ಜ್ ಸ್ಕೂಲ್ ನಂತಹ ಹಲವಾರು ಶಾಲೆಗಳಿಗೂ ಬಾಂಬ್ ಬೆದರಿಕೆಗಳು ಬಂದಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 8 ರಂದು ರಾತ್ರಿ 11:38 ರ ಸುಮಾರಿಗೆ ಕೆಲವು ಶಾಲೆಗಳಿಗೆ ಬೆದರಿಕೆ ಇಮೇಲ್ಗಳನ್ನು ಕಳುಹಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx