ಹೈದರಾಬಾದ್: ಜೈಲಿಂದ ಹೊರಬಂದ ಅಲ್ಲು ಅರ್ಜುನ್ ಅವರನ್ನು ಶನಿವಾರ ರಿಯಲ್ ಸ್ಟಾರ್ ಉಪೇಂದ್ರ ಭೇಟಿಯಾಗಿದ್ದು, ತಮ್ಮ ಯುಐ ಸಿನಿಮಾ ಪ್ರಮೋಷನ್ ಗೆ ತೆರಳಿದ್ದ ವೇಳೆ ಉಪೇಂದ್ರ, ಅಲ್ಲು ಅರ್ಜುನ್ ಅವರನ್ನ ಭೇಟಿಯಾದರು.
ಉಪೇಂದ್ರ ಅವರನ್ನು ಕಂಡೊಡನೆ ಅಲ್ಲು ಅರ್ಜುನ್ ಅಪ್ಪಿಕೊಂಡು ಸ್ವಾಗತಿಸಿದರು. ಬಳಿಕ ಕುಶಲೋಪರಿ ವಿಚಾರಿಸಿದರು. ಈ ಹಿಂದೆ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಉಪೇಂದ್ರ ಹಾಗೂ ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿದ್ದರು.
ಇದೀಗ ಯುಐ ಚಿತ್ರ ಪ್ರಮೋಷನ್ ಗೆ ಅಲ್ಲು ಅರ್ಜುನ್ ಅವರಿಗೆ ಮನವಿ ಮಾಡಲಾಗಿದೆ ಎನ್ನಲಾಗಿದೆ. ಡಿ.20 ಕ್ಕೆ ವಿಶ್ವದಾದ್ಯಂತ ಅಬ್ಬರಿಸೋಕೆ ಯುಐ ಸಿನಿಮಾ ಸಿದ್ಧವಾಗಿದೆ.
ಬಾಲಿವುಡ್ ನಲ್ಲಿ ಆಮೀರ್ ಖಾನ್ ಯುಐ ಚಿತ್ರದ ಪ್ರಮೋಷನ್ ಮಾಡಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಸಾಥ್ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx