ತುಮಕೂರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆದ ಕರ್ನಾಟಕ-ಕೆ.1000 ಕಾರು ರಾಲಿ ಜನರನ್ನು ಆಕರ್ಷಿಸಿತು. ರಾಲಿಯಲ್ಲಿ 56ಕ್ಕೂ ಹೆಚ್ಚು ಕಾರುಗಳು ಟ್ರಾಕ್ ನಲ್ಲಿ ಧೂಳೆಬ್ಬಿಸಿ ಸಾಗಿದವು. ಜನರು ಕೇಕೆ ಶಿಳ್ಳೆ ಹಾಕುತ್ತಾ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
ಗುಬ್ಬಿ ಮತ್ತು ತಿಪಟೂರು ತಾಲೂಕಿನ ಗಡಿ ವ್ಯಾಪ್ತಿಯಲ್ಲಿ ಟ್ರಾಕ್ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 50 ಕಿ.ಮೀ. ಅಂತರದ ಟ್ರಾಕ್ ನಲ್ಲಿ 56 ವಿವಿಧ ಹೆಸರಾಂತ ಕಂಪನಿಯ ಕಾರುಗಳು ಸಂಚರಿಸಿದವು.
ಇದುವರೆಗೂ ಕರ್ನಾಟಕ–ಕೆ.1000 ವತಿಯಿಂದ ಇದುವರೆಗೂ ನಿರಂತರವಾಗಿ 48 ರಾಲಿಗಳನ್ನು ನಡೆಸಿಕೊಂಡು ಬರಲಾಗಿದ್ದು, ಅದ್ರಲ್ಲಿ ಇದುವರೆಗೂ 25 ರಾಲಿಗಳು ತುಮಕೂರು ಜಿಲ್ಲೆಯಲ್ಲಿಯೇ ನಡೆದಿರುವುದು ವಿಶೇಷವಾಗಿದೆ.
ಅನೇಕ ರಾಲಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಹೆಸರಾಂತ ರೈಡರ್ ಗೌರವ ಗಿಲ್, ಶನ ಪಿ , ಆದಿತ್ಯ, ವೀರೇಂದ್ರ ಕಾಶಿಪ್ ಅವರುಗಳು ಸೇರಿದಂತೆ ಅನೇಕ ಮಂದಿ ರಾಲಿಯಲ್ಲಿ ಭಾಗವಹಿಸಿದ್ದರು.
ಎಂ ಆರ್ ಎಫ್., ಮಹೀಂದ್ರ, ವೋಕ್ಸ ವ್ಯಾಗನ್, ಮಾರುತಿ, ಎಂ ಆರ್ ಎಫ್ ಸೇರಿದಂತೆ ಹೆಸರಾಂತ ಕಂಪನಿಯ ಕಾರುಗಳು ಟ್ರಾಕ್ ನಲ್ಲಿ ಸಾಗಿದವು.
ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ತಿಪಟೂರು ಭಾಗದ ಬೊಮ್ಮರಸನಹಳ್ಳಿ , ಶಿವಸಂದ್ರ ,ಹತ್ಯಾಳ್ ,ಕೊಂಡ್ಲಿ ಭಾಗದಲ್ಲಿ ಧೂಳೆಬ್ಬಿಸಿದ ಕಾರ್ ಗಳು. ಒಂದಕ್ಕಿಂತ ಒಂದು ಕಾರುಗಳು ಚಿರತೆ ವೇಗದಲ್ಲಿ ಆಳೆತ್ತರಕ್ಕೆ ಧೂಳೆಬ್ಬಿಸುತ್ತಾ ಚಲಿಸಿದವು. ಅವುಗಳನ್ನ ಕಂಡ ಪ್ರೇಕ್ಷಕರು ಜೋರಾಗಿ ಸಿಳ್ಳೆ ,ಕೂಗು ಹಾಕಿದರೆ ಕೆಲವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಕಾರು ರೇಸ್ ಎರಡು ದಿನಗಳ ಕಾಲ ಪ್ರೇಕ್ಷಕರಿಗೆ ರಸದೌತಣ ನೀಡಿದವು. ಭೋಮ್ಮರಸನಹಳ್ಳಿ, ಶಿವಸಂದ್ರ ,ಕೊಂಡ್ಲಿ ,ಹತ್ಯಾಳ್ ,ತರ‍್ಥರಾಮ ಹಾಗೂ ಕಾರೇಕರ‍್ಚಿಯ ರಸ್ತೆಗಳಲ್ಲಿ ಝಗ ಮಗಿಸುತ್ತಿದ್ದ ನಾನಾ ಮಾಡೇಲ್ ನ ಕಾರುಗಳ ವೇಗದ ಓಡಾಟ ರಸ್ತೆ ತಿರುವಿನಲ್ಲಿಯೂ ಬಗೆ ಬಗೆಯ ಕಲರ್ ನ ಕಾರುಗಳು ಸೌಂಡ್ ಮಾಡಿಕೊಂಡು ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಮೈ ಜುಮ್ಮೆನಿಸುವಂತಿತ್ತು.
ಇದನ್ನ ಹತ್ತಿರದಿಂದ ನೋಡುವುದೇ ಪ್ರೇಕ್ಷಕರಿಗೆ ಹಬ್ಬದ ವಾತಾವರಣ ನಿರ್ಮಿಸಿತ್ತು. ರೋಮಾಂಚನಕಾರಿಯಾಗಿದ್ದ ಕಾರು ರೇಸ್ ನೋಡಲು ಜನರು ರಸ್ತೆ ಬದಿ ತೋಟದ ಸಾಲಿನಲ್ಲಿ ನಿಂತು ಕುತೂಹಲದಿಂದ ಕಾಯುತ್ತಿದ್ದರು. ಕಾರ್ ಗಳು ಬರುತ್ತಿದಂತೆ ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟಿ ಕಾರ್ ಗಳನ್ನ ಹುರಿದುಂಬಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx