ಗೌರಿಬಿದನೂರು: ಜೈನ ಧರ್ಮದ ಯಾವುದೇ ಧರ್ಮ ಕಾರ್ಯದ ಯಶಸ್ವಿಗೆ “ಪುಣ್ಯ ಸಂಪಾದನೆ” ಅಗತ್ಯವಾಗಿದ್ದು ಇದರಿಂದ ಎಲ್ಲಾ ಕಾರ್ಯಗಳ ಯಶಸ್ಸು ಸಾಧ್ಯವಾಗಲಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲೂಕಿನ, ಶ್ರೀ ಕ್ಷೇತ್ರ ಗುಂಡ್ಲಹಳ್ಳಿಯಲ್ಲಿ ಶ್ರೀ ಶೀತಲನಾಥ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷರ 38ನೇ ವಾರ್ಷಿಕ ಪೂಜಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪುರಾತನವಾದ ಜೈನ ಧರ್ಮದಲ್ಲಿ ಯುವ ಪೀಳಿಗೆಯಲ್ಲಿ ಸಂಪ್ರದಾಯ, ಧಾರ್ಮಿಕತೆ ಕಡಿಮೆಯಾಗುತ್ತಿದೆ ಆಧುನಿಕತೆ, ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿದ್ದು, ವಿದ್ಯಾವಂತರಿಗೆ ಸರಿಯಾದ ಹೆಣ್ಣು ಸಿಗುತ್ತಿಲ್ಲ, ಹೆಣ್ಣು ಮಕ್ಕಳಿಗೆ ಗಂಡು ಸಿಗುತ್ತಿಲ್ಲ, ಉದ್ಯೋಗ ಸಿಗುತ್ತಿಲ್ಲ ಎಂಬ ಕೊರಗಿದ್ದು ಇದೊಂದು ಯಕ್ಷ ಪ್ರಶ್ನೆ ಆಗಿದೆ ಇವುಗಳ ನಿವಾರಣೆಗೆ ಪುಣ್ಯ ಸಂಪಾದನೆ ಅಗತ್ಯವಾಗಿದೆ ಎಂದು ಭಟ್ಟಾರಕಶ್ರೀ ಗಳು , ಯುವ ಜನಾಂಗ ನಿತ್ಯ ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಬೆಳೆದಾಗ ಪುಣ್ಯ ಸಂಪಾದನೆಯಾಗಿ ಎಲ್ಲಾ ನಮ್ಮ ಬಯಕೆಗಳು ಈಡೇರಲಿದೆ, ನಿತ್ಯ ಬಸದಿಗೆ ಬನ್ನಿ ,ತಮ್ಮ ಕೈಲಾದ ಸಹಕಾರ ನೀಡಿ, ಸ್ವಚ್ಛತೆ ಕಾಪಾಡಿ ಇದರಿಂದ ಪುಣ್ಯ ದೊರೆಯಲಿದೆ ಎಂದರು .
ತುಮಕೂರು ಸಮೀಪದ ಶ್ರೀ ಕ್ಷೇತ್ರ ಮಂದರಗಿರಿಯಲ್ಲಿ ಪುಣ್ಯ ಸಂಪಾದನೆಗೆ ಬಹಳಷ್ಟು ಕಾರ್ಯಗಳಿವೆ, ಆದರೆ ಅನ್ಯರು ನಿತ್ಯ ಭೇಟಿಯಿಂದ ಕಳುಷಿತಗೊಳ್ಳುತ್ತಿದೆ. ಇಂತಹ ಧರ್ಮ ಕ್ಷೇತ್ರಗಳಿಗೆ ನಿತ್ಯ ಭೇಟಿ ನೀಡಿ ಕ್ಷೇತ್ರವನ್ನು ಉಳಿಸಿ ಬೆಳೆಸಬೇಕೆಂದರು.
ಪರೀಕ್ಷೆ ಬಂದಾಗ ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಸರಿಯಲ್ಲ, ನಿತ್ಯದರ್ಶನ ಅಥವಾ ಸಮಯ ಸಿಕ್ಕಾಗ ಬಸದಿಗೆ ಭೇಟಿ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಶ್ರೀ ಕ್ಷೇತ್ರ ಗುಂಡ್ಲಹಳ್ಳಿ ಪುರಾತನವಾದ ಕ್ಷೇತ್ರವಾಗಿದ್ದು ಪ್ರಾಕೃತಿಕತೆ , ವಿಶ್ರಾಂತಿಗೆ ಹೇಳಿ ಮಾಡಿಸಿದ ಜಾಗ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಡಿ.ಎ.ಪಣಿ ರಾಜ್ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಇಬ್ಬರು ನೋಡಲು ಅಧಿಕಾರಿಗಳನ್ನು ನೇಮಿಸುವಂತೆ ಸಲಹೆ ನೀಡಿ, ಸರ್ಕಾರದಿಂದ ಸಮಾಜಕ್ಕೆ ಕೋಟ್ಯಾಂತರ ರೂಗಳು ಬರುತ್ತಿದೆ, ಇದು ಅನ್ಯರ ಪಾಲಾಗುತ್ತಿದ್ದು ಈ ಬಗ್ಗೆ ಕರ್ನಾಟಕ ಜೈನ ಅಸೋಸಿಯೇಷನ್ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಗೌರಿಬಿದನೂರು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಮಾತನಾಡಿ, ಪ್ರಪಂಚ ಅಂದಕಾರ ದಲ್ಲಿರುವಾಗ ಹುಟ್ಟಿದ ಜೈನ ಧರ್ಮ ಶ್ರೇಷ್ಠ ಧರ್ಮವಾಗಿದೆ, ಶಾಂತಿ, ಆಹಿಂಸೆ ,ತ್ಯಾಗಕ್ಕೆ ಹೆಸರಾಗಿದೆ , ಎರಡು ಸಾವಿರದ ಆರುನೂರು ವರ್ಷಗಳ ಹಿಂದೆಯೇ ಜೈನ ಧರ್ಮ ಪ್ರಪಂಚದಲ್ಲಿ ಪ್ರಚಲಿತದಲ್ಲಿದ್ದು, ತೀರ್ಥಂಕರರು ಸಂಸ್ಕೃತಿ, ಸಂಸ್ಕಾರ, ನೀಡಿ ಪ್ರಪಂಚಕ್ಕೆ ಪರಿಚಯಿಸಿದರು, ಈ ತ್ಯಾಗದ ಫಲವಾಗಿ ಇಂದು ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು ಉಳಿದಿವೆ ಎಂದರು.
ಪ್ರಾಕೃತಿಕ ಸೌಂದರ್ಯ ತಂಪಾದ ಗಾಳಿ ,ಬೆಳಕು, ನೆರಳು ಹೊಂದಿರುವ ಈ ಕ್ಷೇತ್ರ ಇಲ್ಲಿ ಧ್ಯಾನ ಮಾಡಿದರೆ ಶಾಂತಿ ಸಿಗಲಿದೆ ಎಂದು ಕ್ಷೇತ್ರವನ್ನು ಪ್ರಶಂಸಿಸಿದರು.
ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಶ್ರೀಗುಟ್ಟೆ ಬ್ರಹ್ಮದೇವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ದಿಗಂಬರ ಜೈನ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಅಧ್ಯಕ್ಷ ಟಿ.ಡಿ.ಬಾಹುಬಲಿ ಬಾಬು, ಶ್ರೀ ಮಂದರಗಿರಿ ಯಾತ್ರಾ ಸಂಘದ ಅಧ್ಯಕ್ಷರು ಹಾಗೂ ತುಮಕೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಕೆ.ಪಿ.ವೀರೇಂದ್ರ, ಉದ್ಯಮಿ ಟಿ.ಎನ್. ರಾಜೇಂದ್ರ ಪ್ರಸಾದ್, ಟಿ.ಜೆ.ಸಂತೋಷ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಬೆಂಗಳೂರಿನ ಟಿ.ಎನ್.ರಾಜೇಂದ್ರ ಪ್ರಸಾದ್, ಟಿ.ಎಸ್.ಬಾನು ಕುಮಾರ್, ಟಿ.ಸಿ.ವಾಸಂತಿ ದೇವಿ, ರವಿಕಿರಣ್, ತುಮಕೂರಿನ ಎ.ಜಿ.ನಾಗೇಂದ್ರ, ಏ.ವೈ.ಬ್ರಹ್ಮ ಪ್ರಕಾಶ್, ಎ.ಎಂ.ಜಿನಚಂದ್ರು, ಎ.ಆರ್.ಬ್ರಹ್ಮ ಪ್ರಕಾಶ್ ಎ.ಪಿ.ವರ್ಧಮಾನ, ಆರ್.ಜೆ.ಅಭಿನಂದನ್, ಎ.ಎಸ್.ಸುನಿಲ್, ಟಿ.ಡಿ.ಮಹಾವೀರ, ಟಿ.ಎನ್.ಜಿನೇಶ್ ಕುಮಾರ್, ಎ.ಬಿ.ಅಭಿನಂದನ್, ಎ.ಎಸ್.ಚಂದ್ರ ಕೀರ್ತಿ, ಕೆ.ಬಿ.ಕಾಂತರಾಜು, ಟಿ.ಎಸ್ . ಜಯರಾಜು, ಎ.ವೈ.ನೇಮಿ ರಾಜಯ್ಯ , ಎ.ಎನ್.ಮಂಜುನಾಥ್, ಟಿ.ಎಸ್, ಪ್ರಕಾಶ್ ಜೈನ್ ಕುರಂ ಕೋಟೆ, ತೊಂಡೆ ಬಾವಿಯ ಕೆ.ಬಿ.ಜಿನಚಂದ್ರ ಜೈನ್ ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೆ.ಬಿ. ಸನತ್ ಕುಮಾರ್ ಹಾಗೂ ಆರ್. ಸಿ .ಬ್ರಹ್ಮದೇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರೋಹಿತರಾದ ಎಸ್. ಎನ್. ಜಿನ ಚಂದ್ರಯ್ಯ, ಜೆ.ಪಾರ್ಶ್ವನಾಥಯ್ಯ, ಕೆ . ಜೇ ಬ್ರಹ್ಮಾನಂದ ಹಾಗೂ ಸ್ಥಳೀಯ ಪುರೋಹಿತರಾದ ಪಾರ್ಶ್ವನಾಥ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗುಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಸ್ಥಳೀಯರು, ಗುಂಡ್ಲಹಳ್ಳಿ ಜೈನ ಯುವ ಬಳಗ, ಶ್ರಾವಕ -ಶ್ರಾವಕಿಯರು ಸ್ಥಳೀಯ ಗ್ರಾಮಸ್ಥರುಗಳು ,ಮೂಡಲ ಸೀಮೇಯ ಭಕ್ತರುಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx