ಬೀದರ್: ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವರಾದ ಅಮಿತ್ ಶಾ ವಿರುದ್ಧ ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಬೀದರ್ ಘಟಕ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷರಾದ ಯೋಹಾನ್ ಡಿಸೋಜಾ ಮಾತನಾಡಿ, ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ, ಪರಮಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿ ಅವಮಾನ ಮಾಡಿದ್ದಾರೆ.
ಅಮಿತ್ ಶಾ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಮಂತ್ರಿಯಾಗಿ ಸಂವಿಧಾನ ಪಿತಾ ಪರಮ ಪೂಜ್ಯ ಬಾಬಾಸಾಹೇಬ್ ಅವರ ಬಗ್ಗೆ ನಗಣ್ಯ ರೀತಿಯಲ್ಲಿ ವ್ಯಾಖ್ಯಾನಿಸಿ ಮಾತನಾಡಿದ್ದಾರೆ. ಇದು ಎಲ್ಲಾ ಪ್ರಜಾಪ್ರಭುತ್ವವಾದಿಗಳು ಮತ್ತು ಅಂಬೇಡ್ಕರ್ ಅಭಿಮಾನಿಗಳಿಗೆ ಮಾನಸಿಕವಾಗಿ ಬಹಳ ನೋವುಂಟು ಮಾಡಿದ್ದಾರೆ ಅವರು ತಕ್ಷಣವೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ದತ್ತು ಸೂರ್ಯವಂಶಿ, ಸತ್ಯದೀಪ್ ಹವಾನೂರ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರಕಾಶ್ ಕೋಟೆ, ಹಾಗೂ ಶಾದ್ರಕ್ ಸೀತಾಳಕೆ, ಗುಣವಂತ ಸಿಂಧೆ ಮಲ್ಲಿಕಾರ್ಜುನ ಕಪಲಾಪುರ, ರಾಜಕುಮಾರ ಡೋಂಗ್ರೆ, ಸಾಲುಮನ್, ಉಮೇಶ್ ಗುತ್ತೇದಾರ, ಶ್ರೀಮಂತ ಬಗ್ದಾಲ್, ಆಕಾಶ ಬಗ್ದಾಲ್ ಹಾಗೂ ಮಸ್ತಾನ್ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx