ಬೆಂಗಳೂರು: ಬೈಕ್ ಕದಿಯಲು ಬಂದಿದ್ದ ಕಳ್ಳನನ್ನು ಸಾರ್ವಜನಿಕರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಜೆ.ಪಿ.ನಗರ ಒಂದನೇ ಹಂತದ 34ನೇ ಮುಖ್ಯರಸ್ತೆಯ ಅಪಾರ್ಮೇಂಟ್ ಬಳಿ ನಡೆದಿದೆ.
ರಾತ್ರಿ ಸುಮಾರು 12:30ರ ಸಮಯದಲ್ಲಿ ಜೆ.ಪಿ.ನಗರದ ಒಂದನೇ ಹಂತದ 34ನೇ ಮುಖ್ಯರಸ್ತೆಯ ಅಪಾರ್ಮೇಂಟ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ನ ಹ್ಯಾಂಡ್ ಲಾಕ್ ಮುರಿದ ಕಳ್ಳ, ಬೈಕ್ ನ್ನು ತಳ್ಳಿಕೊಂಡು ಹೋಗುತ್ತಿದ್ದ.
ಈ ವೇಳೆ ಮಾಲಿಕ ಶಬ್ದ ಕೇಳಿ ಮನೆಯಿಂದ ಹೊರ ಬಂದಾಗ ಕಳ್ಳ ಬೈಕ್ ತಳ್ಳಿಕೊಂಡು ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಈ ವೇಳೆ ಅಕ್ಕಪಕ್ಕದ ನಿವಾಸಿಗಳನ್ನು ಕರೆದುಕೊಂಡು 1 ಕಿ.ಮೀ. ದೂರ ಬೆನ್ನಟ್ಟಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಕಳ್ಳನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಒಗ್ಗಟ್ಟಿನ ನಡವಳಿಕೆಯಿಂದಾಗಿ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx


