ತುಮಕೂರು: ಜಿಲ್ಲೆಯ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಅಜ್ಜೇನಹಳ್ಳಿ ರಾಮನಹಳ್ಳಿ ಉಪ್ಪಾರಹಟ್ಟಿ ಹಾಗೂ ಮಾರಜ್ಜನಹಟ್ಟಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಗಾಣದ ಹುಣಸೆ ಗ್ರಾಮದ ಸುತ್ತಮುತ್ತ ಇರುವ ಅಜ್ಜನಹಳ್ಳಿ ರಾಮನಹಳ್ಳಿ ಮಾರಜ್ಜನಹಟ್ಟಿ ಸುತ್ತಮುತ್ತ ನೆಲೆಸಿರುವ ಗ್ರಾಮಗಳಲ್ಲಿ ಚಿರತೆಯ ಹಾವಳಿ ಹೆಚ್ಚಿದ್ದು, ಹಾಡು ಹಗಲೇ ಕುರಿಗಳ ಮೇಲೆ ದಾಳಿ ಮಾಡುವ ಚಿರತೆ ಈವರೆಗೆ, ಮೂರು ಕುರಿಗಳನ್ನು, ಐದು ಸಾಕು ನಾಯಿಗಳನ್ನು ಹೊತ್ತೊಯ್ದಿದೆ.
ಭಾನುವಾರ ಸಂಜೆಯೂ ಸಹ ಮಾರಜ್ಜನಹಟ್ಟಿ ಗ್ರಾಮದ ಕುಮಾರ್ ಎಂಬುವವರ ಕುರಿಯ ಮೇಲೆ ಹಗಲು ಹೊತ್ತಿನಲ್ಲಿಯೇ ದಾಳಿ ಮಾಡಿದೆ. ಜನರು ಕೂಗಾಡಿ ಕಲ್ಲುಗಳನ್ನು ತೂರಿ ಓಡಿಸುವ ಪ್ರಯತ್ನ ಮಾಡಿದ್ದು, ಒಂದು ಕುರಿ ಮಾರಣಾಂತಿಕವಾಗಿ ಗಾಯಗೊಂಡಿದೆ. ಈ ಘಟನೆಯಿಂದ ಮಾರಜ್ಜನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಕುರಿಗಳನ್ನು ಮೇಯಿಸಲು ದನಗಳನ್ನು ಮೇಯಿಸಲು ಭಯಭೀತಗೊಂಡಿದ್ದಾರೆ ಹಾಗೂ ರಾತ್ರಿ ಹೊತ್ತು ಜಮೀನುಗಳಲ್ಲಿ ನೀರು ಹಾಯಿಸಲು ಸಹ ಹೆದರಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಆದಷ್ಟು ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಗಾಣದ ಹುಣಸೆ ಗ್ರಾಮದ ಸುತ್ತಮುತ್ತಲಿನ ರಾಮನಹಳ್ಳಿ, ಗುಂಗುರುಪೆಂಟೆ ಮಾರಜ್ಜನಹಟ್ಟಿ ಉಪ್ಪಾರಹಟ್ಟಿ ಅಜ್ಜನಹಳ್ಳಿ ಗ್ರಾಮಗಳ ಸುತ್ತಮುತ್ತ ಚಿರತೆ ಹಾವಳಿ ಜಾಸ್ತಿಯಾಗಿದ್ದು ಜನರು ಕುರಿ ಹಾಗೂ ಜಾನುವಾರುಗಳನ್ನು ಮೇಯಿಸಲು, ರಾತ್ರಿ ಹೊತ್ತು ಅಷ್ಟೇ ಅಲ್ಲ ಹಗಲಿನಲ್ಲೂ ಸಹ ಜಮೀನುಗಳಲ್ಲಿ ನೀರು ಹಾಯಿಸಲು ಭಯ ಬೀಳುತ್ತಿದ್ದು ಆತಂಕದಲ್ಲಿದ್ದಾರೆ ದಯವಿಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮಗಳ ಸಮೀಪ ಬೋನ್ ಅಳವಡಿಸಿ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರರ ಆತಂಕ ದೂರ ಮಾಡಬೇಕಾಗಿ ಗಾಣದ ಹುಣಸೆ ಗ್ರಾಪಂ ಸದಸ್ಯರಾದ ವೀರೇಶ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx