ಹಾಸನ: ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್ ವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ತಾಲೂಕಿನ ಗೊರೂರುಶೆಟ್ಟಿಹಳ್ಳಿ ಬಳಿಯ ಹೇಮಾವತಿ ನಾಲೆಯಲ್ಲಿ ನಡೆದಿದೆ.
ಪ್ರಮೋದ್ (35) ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ಆಗಿದ್ದು, ಇವರು ಮೂಲತಃ ನಗರದ ಇಂದಿರಾನಗರದ ನಿವಾಸಿಯಾಗಿದ್ದಾರೆ.
ಕಳೆದ ಡಿ.29 ರ ಸಂಜೆ ಮನೆಯಲ್ಲಿಯೇ ಫೋನ್ ಬಿಟ್ಟು ಹೊರಗಡೆ ತೆರಳಿದ್ದು, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಅದರಿಂದ ಆತಂಕಗೊಂಡ ಪೋಷಕರು ಸ್ನೇಹಿತರ ಹಾಗೂ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಕೂಡ ಆತ ಪತ್ತೆಯಾಗದ ಕಾರಣ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೇಮಾವತಿ ನದಿಯ ಸೇತುವೆಯ ಬಳಿ ಟಿವಿಎಸ್ ಜ್ಯುಪಿಟರ್ ನಿಂತಿದ್ದು, ಅದರಲ್ಲಿ ಬ್ಯಾಂಕಿನ ಪಾಸ್ ಬುಕ್ ಗಳು ಪತ್ತೆಯಾಗಿವೆ. ಸ್ಥಳೀಯರು ಪಾಸ್ ಬುಕ್ ನಲ್ಲಿ ವಿಳಾಸ ಮತ್ತು ಫೋನ್ ನಂಬರನ್ನು ಪರಿಶೀಲಿಸಿ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದ್ದು, ಸೋಮವಾರ ಬೆಳಿಗ್ಗೆ ಶವ ಪತ್ತೆಯಾಗಿದೆ. ಈ ಸಂಬಂಧ ಗೊರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx


