ಭಾರತೀಯ ಜೈನ್ ಮಿಲನ್ ವಲಯ –8 ರ ಜಿನ ಭಜನಾ ಮಾಲಿಕೆ ಬೆಂಗಳೂರಿನಲ್ಲಿ ವೈಭವಯುತವಾಗಿ ನಡೆಯುವುದರ ಮೂಲಕ ಸಂಪನ್ನಗೊಂಡಿತು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಹಾಗೂ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ ಈ ಜೈನ ಭಜನೆ , ಎರಡು ದಿನಗಳ ಕಾಲ ಸೆಮಿ ಫೈನಲ್ ಹಾಗೂ ಫೈನಲ್ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು .
ಕಾರ್ಯಕ್ರಮದಲ್ಲಿ ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಕಾರ್ಯ ಅಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಮಾತನಾಡಿ, ಜಿನ ಭಜನೆ ಭಾರತೀಯ ಸಂಸ್ಕೃತಿ– ಸಂಸ್ಕಾರದ ಮೂಲಬೇರಾಗಿದ್ದು, ಇದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ ಇದು ಸಾಹಸಮಯ ಕೆಲಸವಾಗಿದ್ದು, ಇದಕ್ಕೆ ಭರದ ಸಿದ್ಧತೆ ನಡೆಸುವುದು, ತೀರ್ಪು ನೀಡುವುದು ಕಷ್ಟದ ಕೆಲಸವೇ ಆಗಿದೆ ಎಂದರು.
ಭಾರತೀಯ ಜೈ ನ್ ಮಿಲನ್ ವಲಯ –8 ರ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ, ಜಿನ ಭಜನೆ ಪರಂಪರೆ ಉಳಿಸುವ ಕೆಲಸವಾಗುತ್ತಿದ್ದು, ಇದೊಂದು ಪುರಾತನ ಸಂಸ್ಕೃತಿಯಾಗಿದೆ .ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದ್ದು, ಇಲ್ಲಿ ಎಲ್ಲರನ್ನು ಪ್ರೋತ್ಸಾ ಹಿಸಲಾಗುತ್ತಿದೆ ಎಂದರು.
ಚಲನಚಿತ್ರ ನಟಿ ಶ್ರುತಿ ಮಾತನಾಡಿ, ಮನೋರಂಜನೆಗೆ ಒತ್ತುಕೊಟ್ಟ, ಜಿನ ಭಜನ ಪರಂಪರೆಯ ಕಲ್ಪನೆ ಅಮೋಘವಾದದ್ದು, ಸಂಗೀತದಿಂದ ನಮ್ಮ ಮನೆತನ ಬದುಕು ಕಟ್ಟಿಕೊಳ್ಳಲು ಕಾರಣವಾಯಿತು. ಕಳೆದು 8 ವರ್ಷಗಳಿಂದ ಈ ಜಿನ ಭಜನಾ ಕಾರ್ಯಕ್ರಮ ನಡೆದದ್ದು ಅವಿಸ್ಮರಣೆಯ ಎಂದರು.
ಭಜನೆ ಇದ್ದರೆ ವಿಭಜನೆ ಅಸಾಧ್ಯ ಇದರಿಂದ ಸಂಸ್ಕಾರ ಪರಂಪರೆ ಉಳಿಯಲು ಸಾಧ್ಯ, ಭಾರತೀಯ ಸಂಸ್ಕಾರ ಪರಂಪರೆಯಲ್ಲಿ ಮೌಲ್ಯಗಳು ಬೆರೆತಿದ್ದು ಇದು ವಿಶ್ವಮಾನ್ಯ ವಾಗಿದೆ ಎಂದರು.
ಖ್ಯಾತ ಹಿನ್ನೆಲೆ ಗಾಯಕಿ ಸಂಗೀತ ಕುಟ್ಟಿ ರವರ ಸಂಗೀತ ರಸ ದೌತಣ ,ನೆರೆದಿದ್ದ ಜನರ ಮನಸೂರೆಗೊಂಡಿತು. ನೃತ್ಯ ಪ್ರದರ್ಶನ ದೊಂದಿಗೆ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
” ಸ್ವಯಂ ಭೂ ಸ್ತೋತ್ರ” ರೂಪಕ ಪ್ರದರ್ಶನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಇದೇ ಸಂದರ್ಭದಲ್ಲಿ ಅನಂತ ಕುಮಾರಿ ಬರೆದು ಜಿನ ಭಜನಾ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಚಿತ್ರ ಕಲಾವಿದ ಚಿತ್ತ ಎಂ. ಜಿನೇಂದ್ರರವರು ಸಿದ್ದಪಡಿಸಿದ್ದ ಕಾರ್ಯಕ್ರಮದ ವೇದಿಕೆ ಹೆಚ್ಚು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಏಳು ಜೈನ್ ಮಿಲನ್ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ತಂಡದ ಸದಸ್ಯರುಗಳು, ಕಲಾವಿದರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿನಭಜನ ಕೇಂದ್ರ ಸಮಿತಿಯ ಶ್ರದ್ಧಾ ಅಮಿತ್, ಸೋನಿ ವರ್ಮಾ, ಪ್ರೇಮ ಸುಖಾನಂದ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಧ್ಯಕ್ಷರಾದ ಪದ್ಮಪ್ರಕಾಶ್, ಉಪಾಧ್ಯಕ್ಷರಾದ ಡಾ. ನೀರಜಾ ನಾಗೇಂದ್ರ ಕುಮಾರ್, ಜೈನ್ ಮಿಲನ್ ವಲಯ ಮುಖಂಡರುಗಳಾದ ವಿಲಾಸ್ ಪಾಸಣ್ಣನವರ್, ಡಾ.ಭರತೇಶ್ ಜಗಶೆಟ್ಟಿ, ಎಂ.ರತ್ನರಾಜು, ಪಿ.ಅಜಿತ್ ಕುಮಾರ್, ಶ್ಯಾಮಲಾ ಧರಣಿಂದ್ರಯ್ಯ, ಯುವರಾಜ್ ಭಂಡಾರಿ, ಶೀಲಾ ಅನಂತರಾಜು, ಸೋಮಶೇಖರ ಶೆಟ್ಟಿ, ಕೆ.ಪ್ರಸನ್ನ ಕುಮಾರ್ , ಉದ್ಯಮಿ ಹರೀಶ್ ಜೈನ್, ಸುದರ್ಶನ್ ಜೈನ್ ,ಸುಭಾಷ್ ಚಂದ್ರ ಜೈನ್, ವಿ .ಜೀವoದರ್ ಕುಮಾರ್, ಪ್ರಶಾಂತ್ ಉಪಾಧ್ಯಾಯ, ಅಶೋಕ್ ಬಾಳೆಕಾಯಿ, ಎಚ್.ಪಿ. ಸುಮತಿ ಕುಮಾರ್, ಭರತರಾಜ ಹಚಾರಿ ,ಯಶೋಧರ ಹೆಗಡೆ , ಪೂರ್ಣಿಮ ಅಶೋಕ್ ಕುಮಾರ್, ವಾಸುದೇವ್, ಮಹಾವೀರ್ ಶಹಾಪುರ್, ಸಿ.ಎಸ್ .ನಾಗರಾಜ್, ಜಿ.ಪಿ.ಚಂದ್ರು ಪ್ರಕಾಶ್, ಎಂ.ಧೀರಜಕುಮಾರ್ , ಎ.ಪಿ. ಕುಮಾರ್, ದೀಪಾಂಜಲಿ ಗೌರಜ್, ಸುಖಾ ನಂದ, ಜಿನೇಂದ್ರ ಹೊಸ ಮನಿ, ಸೇರಿದಂತೆ ಜಿನ ಭಜನಾ ಕೇಂದ್ರ ಸಮಿತಿಯ ಪದಾಧಿಕಾರಿಗಳು ಪದ್ಮಾವತಿ ಬಸ್ತಿ, ವಿಜಯ್ ಕುಮಾರ್, ಜಿನೇಂದ್ರಪ್ಪ, ಅಖಿಲ ಪ್ರಕಾಶ್, ಪ್ರತಿಭಾ ಮಹಿಂದ್ರ, ಅನಂತಕುಮಾರಿ , ವಜ್ರ ಕುಮಾರ್ ಜೈನ್. ಬಿ.ಟಿ.ಸುದರ್ಶನ್.ಎಂ.ಎಂ .ಜಿನೇಂದ್ರ, ಮಾಳ ಹರ್ಷಿಂದ್ರಜೈನ್ , ಬ್ರಾಹ್ಮೀಲ ಮದನ್ ,ಮoಚೇನಹಳ್ಳಿ ರಾಜೇಶ್ ಇನ್ನಿತರ ಪದಾಧಿಕಾರಿಗಳು ರಾಜ್ಯದ ವಿವಿಧ ಜೈನ ಸಂಘಟನೆಗಳ ಮುಖಂಡರುಗಳು ಮಹಿಳಾ ಜೈನ ಘಟಕಗಳ ಪದಾಧಿಕಾರಿಗಳು ಶ್ರಾವಕ –ಶ್ರಾವಕಿಯರು ಭಾಗವಹಿಸಿದ್ದರು . ಟಿ.ವಿ.ನಿರೂಪಕಿ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx