ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಕೊರಟಗೆರೆ ತಾಲೂಕಿನ ಕಸಬಾ ಮತ್ತು ಕೋಳಾಲ ಹೋಬಳಿಯಲ್ಲಿ ಪ್ರವಾಸದಲ್ಲಿದ್ದು, ಅವರನ್ನು ಕೋಳಾಲ ಜನತೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವ್ಯಾಪ್ತಿಯಲ್ಲಿ ಬರುವ 7 ಗ್ರಾ.ಪಂ. ಮತ್ತು ಕಸಬಾ ಹೋಬಳಿಯ 6 ಗ್ರಾ.ಪಂ.ಗಳ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಲಾಯಿತು.
ಭಾರತ ಸರಕಾರದ ಯೋಜನೆಯಡಿ ಬರುವ ಗ್ರಾಮೀಣ ಪ್ರದೇಶದ ಪಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ ಸೋಮಣ್ಣ, ತುಮಕೂರು ಜಿ.ಪಂ. ಮತ್ತು ಕೊರಟಗೆರೆ ತಾ.ಪಂ.ನ ಅಲಿಂಕೋ ಸಾಧನಾ ಸಲಕರಣೆ, ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತುಂತುರು ನೀರಾವರಿ ಯೋಜನೆ, ಪಶು ಇಲಾಖೆಯ ರಾಷ್ಟ್ರೀಯ ಜಾನುವಾರು ಮೀಷನ್ ಯೋಜನೆಯಡಿ ಪಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿದರು.
ಜಿಲ್ಲೆಯಲ್ಲಿ ಅಭಿವೃದ್ಧಿಯ ಒಳ್ಳೆಯ ಕೆಲಸಗಳು ಆಗುತ್ತಿವೆ ಎಂದ ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಗುಣಗಾನ ಮಾಡಿದರು. ಬಳಿಕ ಕೊರಟಗೆರೆ ತಾಲೂಕಿನ 187ಜನ ವಿಶೇಷ ಚೇತನರಿಗೆ ಸಾಧನಾ ಸಲಕರಣೆ ಅಲಿಂಕೋ ಯೋಜನೆಯಡಿ ಎಲೆಕ್ಟ್ರೀಕ್ ಸೈಕಲ್, ಶ್ರವಣ ಸಾಧನಾ, ಲೀಮ್ಸ್, ವಿಲ್ ಚೇರ್, ಟ್ರೈಸಿಕಲ್ ವಿತರಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಕೊರಟಗೆರೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಬಿಜಿಪಿ ಮುಖಂಡ ಬಿ.ಹೆಚ್. ಅನಿಲ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx