ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಜಿಲ್ಲೆಯ ಭಾಗದಲ್ಲಿನ ಕಾಲುವೆ ನಿರ್ಮಾಣ ಕಾಮಗಾರಿಗೆ ಬುಕ್ಕಾಪಟ್ಟಣದಿಂದ ಚಿಂಕಾರದವರೆಗಿನ ವನ್ಯ ಜೀವಿ ಸಂರಕ್ಷಣಾ ಕ್ಷೇತ್ರದ 51.32 ಹೆಕ್ಟೇರ್ ಪ್ರದೇಶವನ್ನು ಬಳಸಿಕೊಳ್ಳಲು ಭಾರತ ಸರ್ಕಾರದ ಅರಣ್ಯ ಇಲಾಖೆ ಅನುಮೋದನೆಯನ್ನು ನೀಡಿ ಆದೇಶ ಹೊರಡಿಸಿದೆಯೆಂದು ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣನವರು ತಿಳಿಸಿದ್ದಾರೆ.
ಭಾರತ ಸರ್ಕಾರದ ಅರಣ್ಯ ಸಚಿವರ ಅಧ್ಯಕ್ಷತೆಯ ಸ್ಥಾಯಿ ಸಮಿತಿ, ರಾಷ್ಟ್ರೀಯ ವನ್ಯ ಜೀವಿ ಮಂಡಳಿ ದಿನಾಂಕ ಡಿ.21ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಶಿಪಾರಸ್ಸು ಮಾಡಿತ್ತು. ಇದಕ್ಕನುಗುಣವಾಗಿ ಭಾರತ ಸರ್ಕಾರದ ಅರಣ್ಯ ಇಲಾಖೆ ಇಂದು ದಿನಾಂಕ ಜ.13ರಂದು ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಗೆ ಪತ್ರ ಮುಖೇನ ತಿಳಿಸಿ, ತುಮಕೂರು ಜಿಲ್ಲೆಯಲ್ಲಿನ ಬುಕ್ಕಾಪಟ್ಟಣದಿಂದ ಚಿಂಕಾರದವರೆಗಿನ ವನ್ಯ ಜೀವಿ ಸರಂಕ್ಷಣಾ ಕ್ಷೇತ್ರದ 51.32 ಹೆಕ್ಕೆರ್ ಪ್ರದೇಶವನ್ನು ಬಳಸಿಕೊಳ್ಳಲು ಅನುಮತಿ ನೀಡಿದೆಯೆಂದು ಕೇಂದ್ರ ಸಚಿವ ಸೋಮಣ್ಣನವರು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಯ ದಿಶೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವ ಭಾರತ ಸರ್ಕಾರ ತುಮಕೂರಿನ ಸಮಸ್ತ ಜನತೆಗೆ ಈ ಒಂದು ವರದಾನ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx