Covaxin ಮತ್ತು Covishield ಈಗ ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಅವರು ಗುರುವಾರ ಈ ಎರಡು ಕೋವಿಡ್ ಲಸಿಕೆಗಳಿಗೆ ಷರತ್ತುಬದ್ಧ ಮಾರುಕಟ್ಟೆ ಅನುಮೋದನೆ ನೀಡಿದ್ದಾರೆ. Covaxin, Covishield to be available in hospitals, clinics; apex body gives nod
ಕೆಲವು ಷರತ್ತುಗಳಿಗೆ ಒಳಪಟ್ಟು ವಯಸ್ಕ ಜನಸಂಖ್ಯೆಗೆ ಈ ಕೋವಿಡ್-19 ಲಸಿಕೆಗಳಿಗೆ ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ನೀಡುವಂತೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿಯು ಈ ಹಿಂದೆ ಶಿಫಾರಸು ಮಾಡಿತ್ತು.
ಮಾರುಕಟ್ಟೆಯ ಅನುಮೋದನೆ ನಂತರ ಲಸಿಕೆಗಳು ಮೆಡಿಕಲ್ ಶಾಪ್‌ಗಳಲ್ಲಿ ಲಭ್ಯವಿರುವುದಿಲ್ಲ. ಕೇವಲ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಂದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಖರೀದಿಸಬೇಕಾಗುತ್ತದೆ.
ಪ್ರತಿ ಆರು ತಿಂಗಳಿಗೊಮ್ಮೆ DCGI ಗೆ ಲಸಿಕೆ ಡೇಟಾವನ್ನು ಸಲ್ಲಿಸಬೇಕು. CoWIN ಅಪ್ಲಿಕೇಶನ್‌ನಲ್ಲಿಯೂ ಡೇಟಾವನ್ನು ನವೀಕರಿಸಬೇಕಾಗುತ್ತದೆ.ಲಸಿಕೆಗಳ ಬೆಲೆಯನ್ನು ಪ್ರತಿ ಡೋಸ್‌ಗೆ 275 ರೂ ಗೆ ಮಿತಿಗೊಳಿಸಲು ಕೇಂದ್ರವು ಯೋಜಿಸುತ್ತಿದೆ ಎಂದು ಈ ಹಿಂದೆ ವರದಿಯಾಗಿತ್ತು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy