ಪಾವಗಡ: ಜಾಮೀಯಾ ಮಸೀದಿ ಮತ್ತು ವಕ್ಫ್ ಆಸ್ತಿಯನ್ನು ಗ್ರಾಮದ ಚಾಂದ್ ಬಾಷಾ ಎನ್ನುವರು ತನ್ನ ಹೆಸರಿಗೆ ಖಾತೆ ಮಾಡಿಕೊಳ್ಳುವುದನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿ, ವೈ.ಎನ್.ಹೊಸಕೋಟೆ ಗ್ರಾಮದ ಜಾಮೀಯಾ ಮಸೀದಿಯ ಪದಾಧಿಕಾರಿಗಳು ಬುಧವಾರ ಪಾವಗಡ ಪಟ್ಣಣದ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಈ ವೇಳೆ ಜಾಮೀಯಾ ಮಸೀದಿಯ ಮುತುವಲ್ಲಿಯಾದ ಸಾಧಿಕ್ ಸಾಭ್ ಮಾತನಾಡಿ, ವೈ.ಎನ್.ಹೊಸಕೋಟೆ ಗ್ರಾಮದ ಸರ್ವೆ ನಂ 234 ರಲ್ಲಿ 17–15 ಗುಂಟೆ ಜಮೀನಿದ್ದು, ಈ ಜಮೀನು ಸುಮಾರು 300 ವರ್ಷಗಳ ಹಳೆಯ ಕಾಲದ್ದಾಗಿದ್ದು, ಮುಸಲ್ಮಾನ್ ಬಾಂಧವರು ಮರಣ ಹೊಂದಿದರೆ ಶವ ಸಂಸ್ಕಾರ ಮಾಡುತ್ತಿದ್ದು, ಈ ಸ್ಥಳ ಬಿಟ್ಟರೆ ನಮ್ಮ ಊರಿಗೂ ಮತ್ತು ಸುತ್ತಮುತ್ತಲಿನ 7 ಊರು ಗಳಿಗೂ ಯಾವುದೆ ಖಬರ್‌ಸ್ಥಾನ್ ಇರುವುದಿಲ್ಲಾ, ಆದರೆ ಚಾಂದ್ ಬಾಷಾ ಎನ್ನುವರು ಈ ಜಮೀನು ತನ್ನದೆ ಎಂದು ಪಾವಗಡ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಈ ಮೊಕದ್ದಮೆಯನ್ನು ನ್ಯಾಯಾಲಯ ವಜಾ ಮಾಡಿ, ಈ ಸ್ಥಳ ಜಾಮೀಯಾ ಮಸೀದಿಗೆ ಸೇರಿದೆ ಎಂದು ಆದೇಶ ನೀಡಿದೆ, ಆದರೂ ಸಹ ಚಾಂದ್ ಬಾಷಾ ತನ್ನ ಹೆಸರಿಗೆ ಖಾತೆ ಪಹಣಿ ಮಾಡಲು ಮಧುಗಿರಿ ಎ.ಸಿ.ಯವರಿಗೆ ಮತ್ತು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಸಹ ವಜಾ ಮಾಡಲಾಗಿದೆ, ಆದರೆ ಚಾಂದ್ ಬಾಷಾ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದ ಆದೇಶ ಧಿಕ್ಕರಿಸಿ ತಹಶೀಲ್ದಾರ್ ಕಛೇರಿಗೆ ಖಾತೆ ಮಾಡಲು ಅರ್ಜಿ ಸಲ್ಲಿಸಿದ್ದು ಈ ಅರ್ಜಿ ಗೆ ಯಾವುದೇ ಮಾನ್ಯತೆ ನೀಡಿದೆ ತಿರಸ್ಕರಿಸಬೇಕೆಂದು ಒತ್ತಾಯಿಸಿದರು.
ಮುಖಂಡ ಮುಜಾಮಿಲ್ ಮಾತನಾಡಿ, 1955ರ ಪ್ರಕಾರ ಮುಸಲ್ಮಾನ್ ಯಾವುದೇ ವ್ಯಕ್ತಿಯೂ ವಕ್ಫ್ ಆಸ್ತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕೆಂದರೆ ಗೆಜಟ್ ನಲ್ಲಿ ನಮೂದಿಸಿರುವ ದಿನಾಂಕದಿಂದ ಒಂದು ವರ್ಷದೊಳಗಾಗಿ ಪ್ರಶ್ನೆ ಮಾಡಬೇಕು, 1965 ರಲ್ಲಿ ಗೆಜೆಟ್ ನಲ್ಲಿ ನಮೂದಾಗಿದ್ದು, ಇಲ್ಲಿಯವರೆಗೂ ಪ್ರಶ್ನೆ ಮಾಡಿರುವುದಿಲ್ಲಾ, ಇವರು ಮುಸಲ್ಮಾನ್ ಜನಾಂಗಕ್ಕೆ ಸೇರಿರುತ್ತಾರೆ, ಇವರು ಪ್ರಶ್ನೆ ಮಾಡುವ ಅವಧಿ ಮುಗಿದಿರುತ್ತದೆ, ಯಾವುದೇ ಕಾರಣಕ್ಕೂ ಈತನ ಹೆಸರಿಗೆ ಖಾತೆ ಪಹಣಿ ಮಾಡಕೂಡದು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ತಹಶೀಲ್ದಾರ್ ಡಿ. ವರದರಾಜು ಮಾತನಾಡಿ, ಈ ಪ್ರಕರಣ ಮಧುಗಿರಿಯ ನ್ಯಾಯಾಲಯದಲ್ಲಿರುವುದರಿಂದ, ಚಾಂದ್ ಬಾಷಾ ಸಲ್ಲಿಸಿರುವ ಅರ್ಜಿಗೆ ಯಾವುದೆ ಮಾನ್ಯತೆ ನೀಡುವುದಿಲ್ಲಾ ಎಂದು ತಿಳಿಸಿದರು.
ಈ ವೇಳೆ ಜಾಮೀಯಾ ಮಸೀದಿಯ ಮುಖಂಡರಾದ ಮಹಮದ್ ಇಸ್ಮಾಯಿಲ್, ಷೂಕೂರ್, ಹಿದಾಯತ್, ಸಯ್ಯದ್ ಸಾದಿಕ್ ಮುಜೀಬ್, ಶಫಿಉಲ್ಲಾ, ನಜೀರ್ ಅಹಮದ್, ಖಾದರ್ ಬಾಷಾ, ನಾಸೀರ್ ಅಹಮದ್ ಖಾನ್, ಮಹಬೂಬ್, ಮತ್ತಿತರರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx