ವಾಷ್ಟಿಂಗನ್: ಹೊರ ದೇಶಗಳ ಮೇಲೆ ಸುಂಕವನ್ನು ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಚೀನಾ, ಭಾರತ ಮತ್ತು ಬ್ರೆಜಿಲ್ ದೇಶಕ್ಕೆ ಹೆಚ್ಚು ಸುಂಕ ವಿಧಿಸಲು ಅಮೆರಿಕ ಮುಂದಾಗಿದೆ.
ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಸೋಮವಾರ ಫ್ಲೋರಿಡಾದ ರಿಟ್ರೀಟ್ ನಲ್ಲಿ ರಿಪಬ್ಲಿಕನ್ನರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ನಮಗೆ ನಿಜವಾಗಿಯೂ ಹಾನಿಕಾರವಾಗಿರುವ ಹೊರಗಿನ ದೇಶಗಳು ಮತ್ತು ಜನರ ಮೇಲೆ ಸುಂಕವನ್ನು ಹಾಕಲಿದ್ದೇವೆ ಎಂದಿದ್ದಾರೆ.
ಇತರ ರಾಷ್ಟ್ರಗಳು ಏನು ಮಾಡುತ್ತಾರೆ ಎಂಬುದನ್ನು ನೋಡಿ. ಚೀನಾ ಮೊದಲ ಸುಂಕ ಹೆಚ್ಚಳದ ರಾಷ್ಟ್ರವಾಗಿದೆ. ನಂತರ ಭಾರತ, ಬ್ರೆಜಿಲ್ ಸೇರಿದಂತೆ ಇತರ ಹಲವು ದೇಶಗಳಿವೆ. ನಮಗೆ ಅಮೆರಿಕ ಮೊದಲ ಆದ್ಯತೆಯಾಗಿರುವುದರಿಂದ ಅಂತಹ ದೇಶಗಳ ಮೇಲೆ ಸುಂಕವನ್ನು ವಿಧಿಸಲಾಗುವುದು. ಇದರಿಂದ ನಮ್ಮ ಬೊಕ್ಕಸಕ್ಕೆ ಹಣ ಬರಲಿದೆ ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4